ಊಹಾಪೋಹದಲ್ಲಿ ಕಾಲ ಕಳೆಯುವುದೇ ಬಿಜೆಪಿಯವರ ಜಾಯಮಾನ ಎಂದ ಸಚಿವ!
ಬುಧವಾರ, 8 ಆಗಸ್ಟ್ 2018 (17:17 IST)
ಶೀಘ್ರದಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದಿರುವ ಕೆ.ಎಸ್. ಈಶ್ವರಪ್ಪನವರ ಹೇಳಿಕೆಗೆ ಸಹಕಾರಿ ಸಚಿವ ಬಂಡೆಪ್ಪಾ ಕಾಶಂಪೂರ್ ತಿರುಗೇಟು ನೀಡಿದ್ದಾರೆ.
ಬೀದರ್ ನಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್, ಬಿಜೆಪಿಯವ್ರಿಗೆ ಬೇರೆ ದಂಧೆ ಎನು ಇಲ್ಲಾ. ಕೇಂದ್ರ ಸರ್ಕಾರದ ಯೋಜನೆಗಳು ಹೇಳೋಕೆ ಅವರ ಬಳಿ ಮಾತೇ ಇಲ್ಲಾ. ಅವ್ರು ಹೀಗೇ ಊಹಾಪೋಹಗಳ ನಡುವೆಯೇ ಇರಲಿ ಎಂದು ತಿರುಗೇಟು ನೀಡಿದ್ದಾರೆ.
ಐದು ವರ್ಷ ಮೈತ್ರಿ ಸರ್ಕಾರ ಪೂರೈಸುತ್ತೆ ಎಂದು ಹೇಳಿದರು. ಇನ್ನು ಎಂ.ಬಿ. ಪಾಟೀಲ್ ಅವರನ್ನ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಕರೆದುಕೊಂಡು ಹೋದ ವಿಚಾರವಾಗಿ ಪ್ರತಿಕ್ರಿಯೇ ನೀಡಿದ್ದು, ಅವರು ಯಾಕೇ ಅವರನ್ನ ಕರೆದುಕೊಂಡು ಹೋಗ್ತಾರೆ..? ಆಷಾಢ ಮಾಸ ಮುಗಿಯುತ್ತಿದೆ. ಸಚಿವರೆಲ್ಲಾರು ಲಾಭಿ ನಡೆಸುತ್ತಿದ್ದಾರೆ. ಇನ್ನು ಕಾಂಗ್ರೇಸ್ ಹಾಗೂ ಜೆಡಿಎಸ್ ಶಾಸಕರು ನಿಷ್ಠೆಯಿಂದ ಇದ್ದಾರೆ. ಒಬ್ಬರು ಯಾರು ಎಲ್ಲೂ ಹೋಗುದಿಲ್ಲಾ. ಬಿಜೆಪಿಯವರು ಊಹಾ ಪೋಹದಲ್ಲೇ ಇರಲಿ ಎಂದು ಹೇಳಿದ್ರು.
ಇನ್ನು ರೇಬಲ್ ಸ್ಟಾರ್ ಅಂಬರೀಶ್ ಜೆಡಿಎಸ್ ನಿಂದ ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿದ್ದು, ಯಾರು ಯಾರು ಅರ್ಜಿ ಹಾಕುತ್ತಾರೆ ಅದನ್ನ ನೋಡಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ಇದೊಂದು ಅದೊಂದು ಊಹಾ ಪೋಹಾ ಯಾರ ಬಗ್ಗೆನೂ ಮಾತನಾಡೊದು ತಪ್ಪಾಗುತ್ತೆ ವಿಪಕ್ಷಗಳಿಗೆ ಬೇರೆ ಮಾತು ಇಲ್ಲಾ ಎಂದು ಜರಿದರು.