ಬಿಜೆಪಿ ಸಂಸದರ ತುರ್ತು ಸಭೆ ಕರೆದ ಬಿಎಸ್ ಯಡಿಯೂರಪ್ಪ
ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆ ಸೇರಿದಂತೆ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲು ಬಿಎಸ್ ವೈ ಸಂಸದರ ಸಭೆ ಕರೆದಿದ್ದಾರೆ.
ಅದರ ಜತೆಗೆ ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಗೂ ಸಮಯಾವಕಾಶ ಕೇಳಿದ್ದಾರೆ. ಚುನಾವಣೆಗಳ ತಯಾರಿ ಕುರಿತು ಈ ಸಂದರ್ಭದಲ್ಲಿ ಬಿಎಸ್ ವೈ ಅಮಿತ್ ಶಾ ಜತೆ ಚರ್ಚಿಸುವ ಸಾಧ್ಯತೆಯಿದೆ. ನಿನ್ನೆ ಸಂಜೆ ಬಿಎಸ್ ವೈ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ, ಸಚಿವ ಸ್ಥಾನ ವಂಚಿತ ಎಂಬಿ ಪಾಟೀಲ್ ಕೂಡಾ ಒಂದೇ ವಿಮಾನದಲ್ಲಿ ತೆರಳಿ ಕುತೂಹಲ ಕೆರಳಿಸಿದ್ದರು.