ಸಿಎಂ ಸಿದ್ದರಾಮಯ್ಯ ಮಣಿಸಲು ಬಿಜೆಪಿ ಬಳಿ ಇದೆಯಂತೆ ಈ ಅಸ್ತ್ರ!
ಸೋಮವಾರ, 26 ಮಾರ್ಚ್ 2018 (05:22 IST)
ಬೆಂಗಳೂರು: ಹೇಗಾದರೂ ಮಾಡಿ ಕಾಂಗ್ರೆಸ್ ನೇತಾರ ಸಿಎಂ ಸಿದ್ದರಾಮಯ್ಯಗೇ ಸೋಲುಣಿಸಲು ಶತಾಯ ಗತಾಯ ಪ್ರಯತ್ನ ಪಡುತ್ತಿರುವ ಬಿಜೆಪಿ ಸಿಎಂ ಕ್ಷೇತ್ರಕ್ಕೆ ವಿಶೇಷ ಪಡೆಯನ್ನೇ ಕಳುಹಿಸಿತ್ತು.
ಇದೀಗ ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಲ್ಲದ ಸರದಾರ. ಆದರೆ ಇದೀಗ ಅದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸೋಲುಣಿಸಲು ಬಿಜೆಪಿ ಕಾರ್ಯಕರ್ತರು ಯೋಜನೆ ಹೆಣೆದಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸೂಕ್ತ, ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿರುವ ಬಿಜೆಪಿಗೆ, ಇಲ್ಲಿನ ಕಾರ್ಯಕರ್ತರೇ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರರನ್ನು ಕಣಕ್ಕಿಳಿಸುವ ಮಾಸ್ಟರ್ ಪ್ಲ್ಯಾನ್ ಹೇಳಿಕೊಟ್ಟಿದ್ದಾರೆ.
ಸ್ವತಃ ಬಿಎಸ್ ವೈ ನಿವಾಸಕ್ಕೆ ಬಂದು ವರುಣಾ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರರನ್ನೇ ಕಣಕ್ಕಿಳಿಸಿ, ಸಿದ್ದರಾಮಯ್ಯ ಎದುರು ಗೆಲ್ಲಿಸಿ ನಿಮ್ಮ ಮುಂದೆ ಬರುತ್ತೇವೆ ಎಂದು ಹೇಳಿದ್ದಾರೆ. ಅತ್ತ ಬಿಎಸ್ ವೈ ಕೂಡಾ ಹೈಕಮಾಂಡ್ ಬಳಿ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಹೈಕಮಾಂಡ್ ಸಮ್ಮತಿಸಿದರೆ ವರುಣಾ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಬಿಎಸ್ ವೈ ನಡುವೆ ಪ್ರತಿಷ್ಠೆಯ ಕಣವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ