ದೆಹಲಿಯ ಪ್ರಾರ್ಥನೆಯಲ್ಲಿ ಭಾಗಿಯಾದವರ ಮೇಲೆ ಹರಿಹಾಯ್ದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ

ಭಾನುವಾರ, 5 ಏಪ್ರಿಲ್ 2020 (10:43 IST)
ಬಳ್ಳಾರಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ಪ್ರಾರ್ಥನೆ ವಿಚಾರ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದವರು ಸಹಕಾರ ನೀಡಲ್ಲ ಅಂದ್ರೆ ಇವರ ಮನಸ್ಥಿತಿ ಏನೆಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಬೇರೆಯವರಿಗೆ ಸೋಂಕು ಹರಡಲು ಹೀಗೆ ಮಾಡುತ್ತಿದ್ದಾರೆ ಎಂದು  ಬಿಜೆಪಿ ಶಾಸಕ ಸೋಮಸೇಖರ್ ರೆಡ್ಡಿ ಆರೋಪ ಮಾಡಿದ್ದಾರೆ.


ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದ ತಮಿಳುನಾಡು, ಆಂಧ್ರದಲ್ಲಿ ಕೊರೊನಾ ಹೆಚ್ಚಾಗಿದೆ. ಆದರೆ ಎಲ್ಲರೂ ಉಗ್ರರ ಮನಸ್ಥಿತಿಯವರು ಎಂದು ಹೇಳಲ್ಲ. ಬಳ್ಳಾರಿ ಸೇರಿ ಕೆಲವು ಕಡೆ ಜನರು ಸ್ಪಂದನೆ ನೀಡುತ್ತಿದ್ದಾರೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದರೆ ಸೋಂಕಿತರು ಹೆಚ್ಚಾಗುತ್ತಿರಲಿಲ್ಲ ಯಾರು ಏನೇ ಮಾಡಿದರೂ ಭಗವಂತ ನಮ್ಮನ್ನ ಕಾಪಾಡುತ್ತಾನೆ, ಈ ಮಣ್ಣಿನಲ್ಲಿ ಹುಟ್ಟಿದವರೆಲ್ಲ ಈ ದೇಶಕ್ಕೆ ಗೌರವ ಕೊಡಬೇಕು ಎಂದು ಹೇಳಿದ್ದಾರೆ.


ಭಾರತ ದೇಶಕ್ಕಾಗಿ ಪ್ರತಿಯೊಬ್ಬರು ಪಣ ತೊಡಬೇಕು.  ಆದರೆ ಪ್ರಧಾನಿ ಮೋದಿ ಹೇಳಿದಂತೆ ದೀಪ ಹಚ್ಚುತ್ತೇವೆ. ಕೆಲವರು ದೀಪ ಹಚ್ಚಲ್ಲ ಅಂದ್ರೆ ಏನೂ ಮಾಡಲಿಕೆ ಆಗಲ್ಲ. ಅವರು ಹಚ್ಚದಿರುವ ದೀಪವನ್ನು ನಾವು ಹಚ್ಚಿ ಕವರ್ ಮಾಡ್ತೇವೆ. ನಮ್ಮ ಮನೆಯಲ್ಲಿ 150 ದೀಪ ಹಚ್ಚುತ್ತೇನೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ