ನೀವು ಕೊಡೋ ಊಟಾನೂ ಬೇಡ, ಬ್ಲಾಂಕೆಟ್ ಬೇಡ ಎಂದು ಸ್ಪೀಕರ್ ಖಾದರ್ ಆಫರ್ ತಿರಸ್ಕರಿಸಿದ ಬಿಜೆಪಿ ನಾಯಕರು

Krishnaveni K

ಗುರುವಾರ, 25 ಜುಲೈ 2024 (10:08 IST)
ಬೆಂಗಳೂರು: ರಾಜ್ಯ ಸರ್ಕಾರದ ಮುಡಾ ಹಗರಣದ ವಿರುದ್ಧ ತನಿಖೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ನಾಯಕರು ನಿನ್ನೆ ರಾತ್ರಿಯಿಡೀ ಸದನದಲ್ಲೇ ಕಾಲ ಕಳೆದಿದ್ದಾರೆ.

ಇನ್ನು, ಬಿಜೆಪಿ ನಾಯಕರಿಗೆ ಜೆಡಿಎಸ್ ಶಾಸಕರೂ ಸಾಥ್ ನೀಡಿದ್ದಾರೆ. ವಿಪಕ್ಷ ಶಾಸಕರು ಅಹೋರಾತ್ರಿ ಧರಣಿ ಮಾಡುವಾಗ ಸ್ಪೀಕರ್ ಸಾಮಾನ್ಯವಾಗಿ ಅವರ ಊಟೋಪಚಾರದ ವ್ಯವಸ್ಥೆ ಮಾಡಿಕೊಡುತ್ತಾರೆ. ಅದೇ ರೀತಿ ಬಿಜೆಪಿ ಶಾಸಕರ ಧರಣಿ ವೇಳೆ ಸ್ಪೀಕರ್ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರದ ಪರವಾಗಿ ಸಚಿವ ಎಚ್ ಕೆ ಪಾಟೀಲ್ ಬಂದು ವಿಪಕ್ಷಗಳ ಅಗತ್ಯಗಳ ಬಗ್ಗೆ ವಿಚಾರಿಸಿಕೊಂಡರು.

ನಿಮಗೆ ಏನು ಊಟ ತರಿಸಿಕೊಡಲಿ, ಮಲಗಲು ವ್ಯವಸ್ಥೆ ಮಾಡಿಕೊಡಬೇಕಾ ಎಂದು ಸ್ಪೀಕರ್ ಯುಟಿ ಖಾದರ್ ವಿಚಾರಿಸಿದಾಗ ಬಿಜೆಪಿ ನಾಯಕರು ಅದನ್ನು ತಿರಸ್ಕರಿಸಿದ್ದಾರೆ. ನಿಮ್ಮ ಹಗರಣದ ದುಡ್ಡಿನಲ್ಲಿ ಖರೀದಿಸಿದ ವಸ್ತುಗಳು ನಮಗೆ ಬೇಡ ಎಂದಿದ್ದಾರೆ. ಬಳಿಕ ಸ್ಪಿಕರ್ ಮಾಡಿರುವ ವ್ಯವಸ್ಥೆಗಳನ್ನು ಪಡೆದರೂ ಅದಕ್ಕೆ ಹಣ ತೆತ್ತಿದ್ದಾರೆ.

ಸದನದಲ್ಲಿ ಧರಣಿ ನಡೆಸುತ್ತಿದ್ದ ಶಾಸಕರಿಗೆ ಕಾಫಿ, ಟೀ, ಊಟ ಮಲಗಲು ದಿಂಬು, ಬ್ಲಾಂಕೆಟ್ ವ್ಯವಸ್ಥೆ ಮಾಡಲಾಗಿತ್ತು. ಇದೆಲ್ಲದಕ್ಕೂ ಬಿಜೆಪಿ ನಾಯಕರೇ ಹಣ ತೆತ್ತಿದ್ದಾರೆ. ಬಳಿಕ ವಿಧಾನಸೌಧದಲ್ಲಿ ಅಲ್ಲಲ್ಲಿ ಜಾಗ ಸಿಕ್ಕಲ್ಲಿ ಮಲಗಿ ರಾತ್ರಿ ಕಳೆದಿದ್ದಾರೆ.


#KarnatakaBJP #Vidhanasoudha #MUDAScam BJP MLAs rejects government offer to food and blanket during protest pic.twitter.com/3qUpUec88W

— Webdunia Kannada (@WebduniaKannada) July 25, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ