ಹನುಮಾನ್ ಚಾಲೀಸಾ ಭಜನೆ, ಅಹೋರಾತ್ರಿ ಧರಣಿ ನೆಪದಲ್ಲಿ ಸದನದಲ್ಲಿ ಹೀಗೆ ಕಾಲ ಕಳೆಯುತ್ತಿದ್ದಾರೆ ಬಿಜೆಪಿ ನಾಯಕರು

Sampriya

ಬುಧವಾರ, 24 ಜುಲೈ 2024 (18:57 IST)
Photo Courtesy X
ಬೆಂಗಳೂರು: ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಸದನದಲ್ಲಿ ಅಹೋರಾತ್ರಿ ಬಿಜೆಪಿ ನಾಯಕರು ಧರಣಿ ನಡೆಸಲು ನಿರ್ಧರಿಸಿದೆ.

ಇದೀಗ ಬಿಜೆಪಿ ನಾಯಕರು ಸದನದ ಬಾವಿಗಿಳಿದು ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಕೂಗಿ ಹೇಳಿ ಪ್ರತಿಭಟನೆ ನಡೆಸುತ್ತಿದೆ.


ಅದರ ಜತೆಗೆ ಬಿಜೆಪಿ ನಾಯಕರು ಸಮಯವನ್ನು ಕಳೆಯಲು ಹನುಮಾನ್ ಚಾಲೀಸಾ ಭಜನೆ ಮಾಡುತ್ತಿದೆ. ಅದರ ಜತೆಗೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಕೂಗಿ ಹೇಳಿ ಗೋವಿಂದ, ಗೋವಿಂದ ಎಂದು ಘೋಷಣೆ ಕೂಗುತ್ತಿದ್ದಾರೆ. ಅದಲ್ಲದೆ ವಿಧಾನ ಪರಿಷತ್ ಸದಸ್ಯ ಎಸ್‌
ಎಲ್ ಬೋಜೇಗೌಡ ಅವರ ಕಂಠದಲ್ಲಿ 'ಅನ್ಯಾಯ ಕಾರಿ ಬ್ರಹ್ಮ' ಕನ್ನಡದ ಜನಪದ ಗೀತೆ ಮೊಳಗಿತು. ಈ ವೇಳೆ ಬಿಜೆಪಿ ನಾಯಕರು ನಗೆ ಬೀರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಇಂದು ಬಿಜೆಪಿ ಸದನದಲ್ಲಿ ಪಟ್ಟು ಹಿಡಿಯಿತು. ಆದರೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ತನಿಖೆಯಲ್ಲಿ ಇರುವುದರಿಂದ ಅದಕ್ಕೆ ಚರ್ಚೆಗೆ ಅವಕಾಶ ನಿರಾಕರಿಸಿದರು.

#Karnataka #BJPKarnataka BJP MLAs in Karnataka assembly protesting in unique way pic.twitter.com/5amoEI5EeU

— Webdunia Kannada (@WebduniaKannada) July 24, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ