ಪೊಲೀಸ್ ನಡೆ ವಿರುದ್ಧ ಕೆಂಡ ಕಾರಿದ ಬಿಜೆಪಿ ಸಂಸದ

ಗುರುವಾರ, 20 ಫೆಬ್ರವರಿ 2020 (14:38 IST)
ಹುಬ್ಬಳ್ಳಿ ಪೊಲೀಸರ ಕ್ರಮಕ್ಕೆ ಬಿಜೆಪಿ ಸಂಸದ ಕಿಡಿಕಾರಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರು ಪೊಲೀಸರ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದೋರಿಗೆ  ಸ್ಟೇಷನ್ ಬೇಲ್ ಕೊಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನೆ ಮಾಡಿದ್ದಾರೆ.

ಬೇಲ್ ಕೊಟ್ಟವರು ಹಾಗೂ ಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಆರೋಪಿಗಳನ್ನು ಸುಮ್ಮನೆ ಬಿಡಬಾರದು. ಈ ವಿಷಯ ಗೃಹ ಸಚಿವ ಗಮನಕ್ಕೆ ಬಂದಾಗ ಕಠಿಣ ಕ್ರಮ ಕೈಗೊಳ್ಳಿ ಅಂತ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ