ಪೈಲಟ್ ಅಭಿನಂದನ್ ಬಿಡುಗಡೆಯನ್ನು ಪ್ರಶ್ನಿಸಿ ಕೋರ್ಟ್ ಮೇಟ್ಟಿಲೆರಿದ ಪಾಕ್ ಹೋರಾಟಗಾರರು
ಶುಕ್ರವಾರ, 1 ಮಾರ್ಚ್ 2019 (11:26 IST)
ಪಾಕಿಸ್ತಾನ್ : ಪಾಕ್ ವಶದಿಂದ ಬಿಡುಗಡೆಯಾಗುತ್ತಿರುವ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ಭಾರತದಲ್ಲಿ ಸಕಲ ಸಿದ್ಧತೆಗಗಳು ನಡೆಯುತ್ತಿದ್ದರೆ ಅತ್ತ ಪಾಕಿಸ್ತಾನದಲ್ಲಿ ಪೈಲಟ್ ಅಭಿನಂದನ್ ಬಿಡುಗಡೆಯನ್ನು ಪ್ರಶ್ನಿಸಿ ಪಾಕ್ ಹೋರಾಟಗಾರರು ಕೋರ್ಟ್ ಮೇಟ್ಟಿಲೆರಿದ್ದಾರೆ.
ಹೌದು. ಎರಡು ದಿನಗಳ ಹಿಂದೆ ಶತ್ರುಪಡೆಯನ್ನು ಹಿಮ್ಮೆಟ್ಟಿಸುವ ವೇಳೆ ಪತನಗೊಂಡ ಮಿಗ್ ವಿಮಾನದ ಪೈಲಟ್ ಅಭಿನಂದನ್ ಅವರನ್ನು ಸೆರೆ ಹಿಡಿದು ತನ್ನ ವಶದಲ್ಲಿರಿಸಿಕೊಂಡ ಪಾಕಿಸ್ತಾನ, ಅಭಿನಂದನ್ ರನ್ನು ಶಾಂತಿ ಸ್ಥಾಪನೆ ಉದ್ದೇಶದಿಂದ ಶುಕ್ರವಾರ ಬಿಡುಗಡೆ ಮಾಡೋದಾಗಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಆದರೆ ಇದೀಗ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಯನ್ನು ಪ್ರಶ್ನಿಸಿ ಪಾಕ್ ಹೋರಾಟಗಾರರು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.