ಆಪರೇಷನ್ ಕಮಲಕ್ಕೆ ಬಿಜೆಪಿ ಸಜ್ಜು?

ಶನಿವಾರ, 12 ಜನವರಿ 2019 (17:07 IST)
ದೆಹಲಿಯಲ್ಲಿ ಆರಂಭವಾಗಿರುವ ಬಿಜೆಪಿಯ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಶಾಸಕರು  ದೆಹಲಿ ಯಾತ್ರೆ ಕೈಗೊಂಡಿದ್ದು, ಅಲ್ಲಿಯೇ ಆಪರೇಷನ್ ಕಮಲಕ್ಕೂ ಚಾಲನೆ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

 ರಾಜ್ಯ ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಅತೃಪ್ತಿ, ಅಸಮಾಧಾನದ ಲಾಭ ಪಡೆಯಲು ಬಿಜೆಪಿ ತನ್ನದೇ ಆದ ರಾಜಕೀಯ ದಾಳ ಉರುಳಿಸಿದ್ದು, ತೆರೆಮರೆಯಲ್ಲಿ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದೆ.

ರಾಜ್ಯದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಮೂಡಿರುವ ಅಸಮಾಧಾನ, ಅತೃಪ್ತಿಯ ಲಾಭ ಪಡೆದು ಸರ್ಕಾರ ರಚನೆಗೆ ಕಸರತ್ತು ನಡೆಸಿರುವ ಬಿಜೆಪಿ, ಒಂದು ವೇಳೆ ಆಪರೇಷನ್ ಕಮಲ ಯಶಸ್ವಿಯಾದರೆ ಬಿಜೆಪಿ ಪಕ್ಷದ ಯಾವುದೇ ಶಾಸಕರುಗಳು ಕಾಂಗ್ರೆಸ್-ಜೆಡಿಎಸ್ಆಮಿಷಗಳಿಗೆ ಒಳಗಾಗದೇ ಪಕ್ಷದಲ್ಲೇ ಉಳಿಸಿಕೊಂಡು, ಒಗ್ಗಟ್ಟು ಕಾಪಾಡಲು ವ್ಯವಸ್ಥಿತವಾದ ಯೋಜನೆ ರೂಪಿಸಿ, ಶಾಸಕರನ್ನು ಭದ್ರಗೊಳಿಸುವತ್ತ ಚಿತ್ತ ಹರಿಸಿದೆ.

ಬಿಜೆಪಿಯ ಬಹುತೇಕ ಸದಸ್ಯರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ದೆಹಲಿಯಲ್ಲಿರುವ ಶಾಸಕರ ಜತೆ ವರಿಷ್ಠ ನಾಯಕರುಗಳ ಸಭೆ, ಸಮಾಲೋಚನೆಗಳು ನಡೆದಿವೆ. ಜತೆಗೆ ದೆಹಲಿ ನಾಯಕರು ಕಾಂಗ್ರೆಸ್ ಅತೃಪ್ತ ಶಾಸಕರುಗಳ ಜತೆಯೂ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ