ರಾಜಧಾನಿಗರಿಗೆ ಜೀವಜಲ ಇನ್ನೂ ತುಟ್ಟಿ!

ಗುರುವಾರ, 10 ಜನವರಿ 2019 (15:29 IST)
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನರಿಗೆ ನೀರಿನ ದರ ಹೆಚ್ಚಳ ಮೂಲಕ ಶಾಕ್ ನೀಡಲು ಜಲಮಂಡಲಿ ಸಿದ್ಧತೆ ನಡೆಸಿದೆ.   

ವಿದ್ಯುತ್ ದರ ಏರಿಕೆ, ಪೆಟ್ರೋಲ್, ಡೀಸೆಲ್ ದರ ಏರಿಕೆ, ಆಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯ ಬೆನ್ನ ಹಿಂದೆಯೇ ಬೆಂಗಳೂರು ನಗರದ ನಾಗರಿಕರಿಗೆ ನೀರಿನ ದರ ಏರಿಕೆಯ ಬರೆ ಹಾಕಲು ಜಲಮಂಡಳಿ ಮುಂದಾಗಿದೆ.

ಬೆಂಗಳೂರು ನಗರದ ನಾಗರಿಕರಿಗೆ ಕುಡಿಯುವ ನೀರು ಒದಗಿಸುವ ಬೆಂಗಳೂರು ಜಲಮಂಡಳಿ ನೀರಿನ ದರವನ್ನು ಶೇ. 30 ರಿಂದ 35ರಷ್ಟು ಹೆಚ್ಚಿಸಲು ಮುಂದಾಗಿದ್ದು,  ದರ ಏರಿಕೆ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಜಲಮಂಡಳಿ ಕಳೆದ ನಾಲ್ಕು ವರ್ಷಗಳಿಂದ ನೀರಿನ ದರವನ್ನು ಏರಿಕೆ ಮಾಡಿಲ್ಲ. ಹಾಗಾಗಿ ಶೇ. 30 ರಿಂದ 35 ರಷ್ಟು ದರ ಏರಿಕೆಗೆ ಅನಿವಾರ್ಯವಾಗಿದ್ದು ಸರ್ಕಾರ ಅನುಮತಿ ಪಡೆಯಲು ಎಂದು ಜಲಮಂಡಳಿ ಪ್ರಸ್ತಾವನೆಯಲ್ಲಿ ರಾಜ್ಯ ಸರ್ಕಾರವನ್ನು ಕೋರಲಿದೆ.

ಸದ್ಯ ಜಲಮಂಡಳಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ದರ ಏರಿಕೆ ಅನಿವಾರ್ಯ. ಹಾಗಾಗಿ ಶೇ. 30 ರಿಂದ 35 ರಷ್ಟು ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ಮೂಲಗಳು ಹೇಳಿವೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ. ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರ ಇಳಿಮುಖವಾದರೂ ಕಳೆದ ವಾರವಷ್ಟೆ ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿತ್ತು. ಆಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದ್ದು, ಇದರಿಂದ ಬರುವ ಫೆ. 1 ರಿಂದ ಆಸ್ತಿ ತೆರಿಗೆಯ ನೋಂದಣಿ ಶುಲ್ಕಗಳು ಹೆಚ್ಚಾಗಲಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ