ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

geetha

ಮಂಗಳವಾರ, 16 ಜನವರಿ 2024 (17:00 IST)
ಬೆಂಗಳೂರು-ತಮಿಳು ಕವಿ ಹಾಗೂ ತತ್ವಜ್ಞಾನಿ ತಿರುವಳ್ಳುವರ್ ಜನ್ಮದಿನದ ಅಂಗವಾಗಿ ತಿರುವಳ್ಳುವರ್ ಪ್ರತಿಮೆಗೆ  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಲಾರ್ಪಣೆ ಮಾಡಿದ್ರು.ಬೆಂಗಳೂರಿನ ಹಲಸೂರ್ ಲೇಕ್ ಬಳಿ ಇರುವ ತಿರುವಳ್ಳುವರ್ ಪ್ರತಿಮೆ ಇದ್ದಾಗಿದ್ದು,2009ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಿ ಪ್ರತಿಮೆ ನಿರ್ಮಾಣವಾಗಿತ್ತು.ಇದೇ ವೇಳೆ ಪೊಂಗಲ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಇನ್ನು ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ ಮೋಹನ್, ಶಾಸಕ ಸಿ.ಕೆ ರಾಮಮೂರ್ತಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.

ತಿರುವಳ್ಳುವರ್ ಅವರ ಜಯಂತಿ ನಮಗೆಲ್ಲ ಗೊತ್ತಿದೆ.ಕಳೆದ ಹಲವು ದಶಕಗಳಿಂದ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗಬೇಕು.ಚೆನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣಗೊಳ್ಳಬೇಕು.ನಿರಂತರವಾಗಿ ಹೋರಾಟ ನಡೆಯುತ್ತಿತ್ತು.ಹಲವು ದಶಕಗಳ ಹೋರಾಟಕ್ಕೆ ಉತ್ತರ ಸಿಗದ ಸಂಧರ್ಭ 2009ರಲ್ಲಿ ಯಡಿಯೂರಪ್ಪ ಸಿಎಂ ಇದ್ದಾಗ.ಕನ್ನಡ ಹಾಗೂ ತಮಿಳಿಗರು ಸಹೋದರ ರೀತಿ ಇರಬೇಕು.ಎರಡೂ ರಾಜ್ಯದವರು ಒಟ್ಟಿಗೆ ಬಾಳಬೇಕು ಅಂತ ಸ್ಪಷ್ಟ ಉದ್ದೇಶ ಇತ್ತು.ದಶಕಗಳ ಹೋರಾಟ ನಡೆದಿತ್ತು, ಹಲವರು ಪ್ರಾಣ ಸಹ ಕಳೆದುಕೊಂಡಿದ್ರು.

ಯಡಿಯೂರಪ್ಪ ಅವರ ದೂರ ದೃಷ್ಟಿಯಿಂದ ಸಮಸ್ಯೆ ಬಗೆಹರಿದಿತ್ತು, ಅದೊಂದು ಇತಿಹಾಸ.ತಿರುವಳ್ಳುವರ್ ಅವರ ಪ್ರತಿಮೆ 18 ವರ್ಷಗಳ ಕಾಲ ಮುಚ್ಚಿಡಲಾಗಿತ್ತು.ಅನಾವರಣ ಆಗಲು ಅವಕಾಶ ಸಿಕ್ಕಿರಲಿಲ್ಲ.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ತ.ನಾ ಸಿಎಂ ಜೊತೆ ಚರ್ಚುಸಿದ್ರು.ಬಳಿಕ ಇಲ್ಲಿ ತಿರುವಳ್ಳುವರ್, ಚೆನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣ ಮಾಡಲಾಯ್ತು.ಬಹಳ ಸಂತೋಷ ಆಗಿದೆ.ವಿಶ್ವಕವಿ ತಿರುವಳ್ಳುವರ್ ಜಯಂತಿ ಸಂಧರ್ಭದಲ್ಲಿ ನಾನು ಬಿಜೆಪಿ ರಾಜ್ಯಾಧ್ಯಕ್ಷ ಆಗಿ ಬಂದು ಮಾಲಾರ್ಪಣೆ ಮಾಡಿದ್ದೇನೆ.ನನ್ನ ಜೊತೆ ಅನೇಕ ನಾಯಕರೂ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ