ಬಳ್ಳಾರಿ, ಜಮಖಂಡಿ, ರಾಮನಗರ, ಮಂಡ್ಯದಲ್ಲಿ ಬಿಜೆಪಿ ಗೆಲುತ್ತದೆ: ಪ್ರತಾಪ ಸಿಂಹ

ಬುಧವಾರ, 31 ಅಕ್ಟೋಬರ್ 2018 (16:38 IST)
ಕಾಂಗ್ರೆಸ್‌ನ 10 ಸಚಿವರು, ಮೂರು ಡಜನ್ ಶಾಸಕರು, ಸಂಸದರು ಬೀಡು ಬಿಟ್ಟಿದ್ದರೂ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಗೆಲವು ಸಾಧಿಸಲಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಶ್ರೀರಾಮಲು ಅವರನ್ನು ಎದುರಿಸಲು ಎಷ್ಟೊಂದು ಪ್ರಯತ್ನ ಮಾಡುತ್ತಿದ್ದಾರೆ. ಬಳ್ಳಾರಿ ಅಭಿವೃದ್ಧಿಗೆ ಶ್ರೀರಾಮಲು ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಶ್ರೀರಾಮಲು ಕನ್ನಡ ಮಾತನಾಡುವ ಬಗ್ಗೆ ಮಾತನಾಡಿದ್ದಾರೆ. ಬೇರೆಯವರನ್ನ ಅವಹೇಳನ ಮಾಡುವುದರಲ್ಲಿ ಸಿದ್ದರಾಮಯ್ಯ ತೊಡಗಿದ್ದಾರೆ. ಸಕಲೇಶಪುರದವನು ಅಂತ ನನ್ನ ಮರಳಿ ಕಳಿಸುವುದಾಗಿ ಹೇಳಿದ್ದಾರೆ. ಆದರೆ ಅವರನ್ನ ಮೈಸೂರಿನಿಂದಲೇ ಓಡಿಸಿದ್ದೇವೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ ಸಿಂಹ ಕಿಡಿಕಾರಿದ್ದಾರೆ.

ಉಗ್ರಪ್ಪ, ಸೋನಿಯಾ ಗಾಂಧಿ ಯಾವ ಜಿಲ್ಲೆಯವರು? ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ವಾ? ಹೊರಗಿನವರನ್ನು ತಂದು ನಿಲ್ಲಿಸುವ ಹಿಂದಿನ ಉದ್ದೇಶ ಏನು? ಡಿ.ಕೆ. ಶಿವಕುಮಾರ್ ಇಲ್ಲಿ ಬಂದು ಶ್ರೀರಾಮಲು ಬಗ್ಗೆ ಏನೇನು ಮಾತನಾಡುತ್ತಿದ್ದಾರೆ. ಬಳ್ಳಾರಿ ಜನರ ಮನೆಗೆ ಬಂದು ಯಾರಾದ್ರೂ ಬಾಗಿಲು ತಟ್ಟಿದ್ದರೆ ಅವರು ಕಳ್ಳರಲ್ಲ. ಬದಲಾಗಿ ಅವರು ಕಾಂಗ್ರೆಸ್ಸಿಗರು. ಹೀಗಾಗಿ ಈ ಕಳ್ಳತನದಿಂದ ಮನೆಗೆ ಬರುವವರು ಕಾಂಗ್ರೆಸ್ಸಿಗರು. ಅವರನ್ನ ಒಳ ಬಿಟ್ಟುಕೊಳ್ಳಬೇಡಿ. ಆದ್ರೆ ಸೋಗಲಾಡಿತನದಿಂದ ಮತಕೇಳುವ ಪರಿಸ್ಥಿತಿ ಕಾಂಗ್ರೆಸ್ ತಂದಿಟ್ಟಿದ್ದಾರೆ. ಬಳ್ಳಾರಿ, ಜಮಖಂಡಿ, ರಾಮನಗರ, ಮಂಡ್ಯದಲ್ಲಿ ಬಿಜೆಪಿ ಗೆಲುತ್ತದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ