ಬೆಂಗಳೂರು: ಸದನದಲ್ಲಿ ಆರ್ ಎಸ್ಎಸ್ ಗೀತೆ ಹಾಡಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಸದನದಲ್ಲಿ ವಿಪಕ್ಷ ಬಿಜೆಪಿ ಕಾಲೆಳೆಯಲು ಆರ್ ಎಸ್ಎಸ್ ಧ್ಯೇಯ ಗೀತೆ ನಮಸ್ತೇ ಸದಾ ವತ್ಸಲೇ ಹಾಡು ಹಾಡಿ ಡಿಕೆ ಶಿವಕುಮಾರ್ ಪೇಚಿಗೆ ಸಿಲುಕಿದ್ದರು. ಸ್ವಪಕ್ಷೀಯರೇ ಡಿಕೆ ಶಿವಕುಮಾರ್ ವಿರುದ್ಧ ತಿರುಗಿಬಿದ್ದಿದ್ದರು. ಇದನ್ನು ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಯಾಚಿಸಬೇಕು ಎಂದು ಬಿಕೆ ಹರಿಪ್ರಸಾದ್ ನಿನ್ನೆ ಆಗ್ರಹಿಸಿದ್ದರು.
ಇಂದು ಡಿಕೆ ಶಿವಕುಮಾರ್ ನಾನು ತಪ್ಪು ಮಾಡಿಲ್ಲ.ಹಾಗಿದ್ದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ. ಜೊತೆಗೆ ನನ್ನ ಪಕ್ಷ ನಿಷ್ಠೆ ಬಗ್ಗೆ ಪ್ರಶ್ನಿಸುವವರು ಮೂರ್ಖರು ಎಂದೂ ಬಿಕೆ ಹರಿಪ್ರಸಾದ್ ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಕೆ ಹರಿಪ್ರಸಾದ್ ತಪ್ಪು ಅಂತ ಗೊತ್ತಾದ್ರೆ ಸಂತೋಷ ಎಂದಿದ್ದಾರೆ. ಈ ಮೂಲಕ ಉಭಯ ನಾಯಕರ ನಡುವಿನ ಮಾತಿನ ಚಕಮಕಿ ಮುಂದುವರಿದಿದೆ.