ಇನ್ನೂ ಮಾಜಿ ಕಾರ್ಪರೇಟರ್ ರೂಪ ಮಾತನಾಡಿ ನಮ್ಮ ನಾಯಕರಾದ ಪ್ರಿಯಕೃಷ್ಣ, ಕೃಷ್ಣಪ್ಪರಿಂದ ಮಹಿಳಾ ಸಮಾವೇಶ ಆಯೋಜನೆ ಆಗಿತ್ತು.ನಿನ್ನೆ ಪರಿಶೀಲನೆ ನಡೆಸಲು ಮೈದಾನಕ್ಕೆ ಹೋಗಿದ್ದಿವಿ.19 ರಂದು ಸಮಾವೇಶಕ್ಕೆ ಫಿಕ್ಸ್ ಆಗಿತ್ತು.ಬಿಬಿಎಂಪಿಗೆ ಹಣ ಪಾವತಿ ಮಾಡಿ ಬಿಜಿಎಸ್ ಮೈದಾನದಕ್ಕೆ ಅನುಮತಿ ಸಿಕ್ಕಿತ್ತು.ನಾವು ಕಾನೂನು ಬದ್ದವಾಗಿ ಕಾರ್ಯಕ್ರಮ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಿವಿ.ಆದ್ರೆ ಮಾನ್ಯ ಸಚಿವರು ಮತ್ತು ಬಿಜೆಪಿ ನವರು ನಮ್ಮ ಕಾರ್ಯಕ್ರಮ ಯಶ್ವಸಿಯಾಗಬಾರದು ಅಂತ ಗಲಾಟೆ ಮಾಡಿದ್ದಾರೆ.ನಮ್ಮ ಕಾರ್ಯಕ್ರಮ ವನ್ನು ಸಹ ರದ್ದು ಮಾಡಲಾಗಿದೆ.ಇದಕ್ಕೆ ಪೊಲೀಸರು ಯಾಕೆ ರದ್ದು ಮಾಡಿದ್ರು ಎಂಬುದರ ಬಗ್ಗೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ್ರು. ಸೋಮಣ್ಣ ಬೆಂಬಲಿಗರು ಪೆಟ್ರೋಲ್ ಮತ್ತು ಮಾರಾಕಾಸ್ತ್ರದೊಂದಿಗೆ ಮೈದಾನಕ್ಕೆ ಬಂದಿದ್ರು ಎಂದು ಗಂಭೀರ ಆರೋಪ ಮಾಡಿದ್ರು.