ಬೆಂಗಳೂರು: ಒಂದೆಡೆ ಹೊಸ ವಿವಿಗಳಿಗೆ ಬೀಗ, ಮತ್ತೊಂದೆಡೆ ಇರೋ ವಿವಿಗಳಿಗೆ ಇಲ್ಲ ಅನುದಾನ. ಧಾರವಾಡದ ಕರ್ನಾಟಕ ವಿವಿಯ ನಿವೃತ್ತರ ಪಿಂಚಣಿಗೂ ಇಲ್ಲ ಅನುದಾನ ಎಂದು ಕಾಂಗ್ರೆಸ್ ಸರ್ಜಾರದ ವಿರುದ್ಧ ಬಿಜೆಪಿ ಆರೋಪ ಮಾಡಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ. ಬಿಜೆಪಿ ಅವಧಿಯಲ್ಲಿ ಹೊಸ ವಿವಿಗಳ ಸ್ಥಾಪನೆ, ವಿವೇಕ ಕೊಠಡಿ ಯೋಜನೆ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸೇರಿದಂತೆ ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಪಣತೊಟ್ಟಿತ್ತು.
ಕಾಂಗ್ರೆಸ್ ಸರ್ಕಾರ ಬಿಜೆಪಿ ಅವಧಿಯ ಜನಪರ ಯೋಜನೆಗಳನ್ನು ರದ್ದುಗೊಳಿಸಿ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಹಾಳು ಬಾವಿಗೆ, ಉನ್ನತ ಶಿಕ್ಷಣ ಅಯೋಮಯ ಎಂದು ಬಿಜೆಪಿ ಲೇವಡಿ ಮಾಡಿದೆ.