ರಾಜ್ಯ ಸರ್ಕಾರ ಪತ್ರ ಬರೆದರೆ ಮೆಟ್ರೋ ದರ ಇಳಿಕೆ ಸಾಧ್ಯ: ಸಂಸದ ತೇಜಸ್ವಿ ಸೂರ್ಯ

Sampriya

ಬುಧವಾರ, 12 ಫೆಬ್ರವರಿ 2025 (19:22 IST)
Photo Courtesy X
ನವದೆಹಲಿ: ಸದ್ಯ ರಾಜ್ಯ ರಾಜಕಾರಣದಲ್ಲಿ ಮೆಟ್ರೋ ದರ ಏರಿಕೆ ಸಂಬಂಧ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಅವರು ಮೆಟ್ರೋ ದರ ಏರಿಕೆ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ರ ಬರೆದರೆ ನಾಳೆಯೇ ಸಮಿತಿ ರಚನೆಯಾಗಲಿದೆ ಎಂದರು.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಿರುವ ದರ ಪರಿಷ್ಕರಣೆಯನ್ನುಮೆಟ್ರೋ ನಿಯಮಗಳಲ್ಲಿ ತಡೆ ಹಿಡಿಯಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಕೋರ್ಟ್ ಮಧ್ಯಪ್ರವೇಶ ಮಾಡುತ್ತಾ ಗೊತ್ತಿಲ್ಲ ಎಂದು ಹೇಳಿದರು.

ಈ ಸಂಬಂಧ ನಾನು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಪ್ರಯಾಣಿಕರ ಸಂಖ್ಯೆ ಕುಸಿತದ ಬಗ್ಗೆಯೂ ಗಮನಕ್ಕೆ ತರಲಾಗಿದೆ. ಅವರು ರಾಜ್ಯ ಸರ್ಕಾರ ಮತ್ತೊಮ್ಮೆ ಪತ್ರ ಬರೆದು ದರ ಪರಿಷ್ಕರಣೆ ಮಾಡಲು ಮನವಿ ಮಾಡಿದರೆ ಮತ್ತೊಮ್ಮೆ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ.

ಮೆಟ್ರೋ ದರಗಳು ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದೆ.  ಏಕಾಏಕಿ ಮೆಟ್ರೋ ದರವನ್ನು 50%, 100% ಏರಿಕೆಯಾಗಿದೆ. ಸಂಬಳದ ದೊಡ್ಡ ಭಾಗ ಈಗ ಮೆಟ್ರೋಗೆ ಕೊಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹೀಗಾಗಿ ರಾಜ್ಯ ಸರ್ಕಾರದಿಂದ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಇದರಿಂದ ಮಾತ್ರ ದರ ಇಳಿಕೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ