ಸಂಚಾರಿ ಪೊಲೀಸರಿಗೆ ನಿದ್ದೆಗೆಡಿಸುತ್ತಿರೋ ಬ್ಲಾಕ್ ಸ್ಫಾಟ್ ಗಳು..!

ಬುಧವಾರ, 23 ಆಗಸ್ಟ್ 2023 (19:00 IST)
ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಆಕ್ಸಿಡೆಂಟ್ ಕೇಸ್ ಗಳು ತುಂಬಾನೇ ತಲೆಕೆಡಿಸ್ತಾ ಇವೆ. ದಿನೇ ದಿನೇ ಅಪಘಾತಗಳು ಹೆಚ್ಚಾಗ್ತಾ ಇದ್ದು ಸಾವು ನೋವು ಕೂಡ ಜಾಸ್ತಿ ಆಗ್ತಾ ಇದೆ. ಇದ್ರಿಂದ ನಾಲ್ಕು ಇಲಾಖೆಗಳು ಸೇರಿ ಸರ್ವೆ ಮಾಡಿದ್ದು ನಗರದಲ್ಲಿ 59 ಬ್ಲಾಕ್ ಸ್ಫಾಟ್ ಗಳನ್ನು ಗುರ್ತಿಸಿದ್ದಾರೆ‌. ಕಳೆದ ಮೂರು ತಿಂಗಳಿನಿಂದ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗ್ತಾ ಇದೆ. ಇದ್ರಿಂದ ತಲೆಕೆಡಿಸಿಕೊಂಡ ಸಂಚಾರಿ ಪೊಲೀಸರು ಅಪಘಾತಗಳು ಯಾಕೆ ಆಗ್ತಾ ಇವೆ ಅನ್ನೋ ಸರ್ವೆ ಮಾಡಲು ಮುಂದಾಗಿದ್ದಾರೆಮ ಅದು ಕೂಡ ಸಾರಿಗೆ ಇಲಾಖೆ, PWD ಹಾಗೂ ಬಿಬಿಎಂಪಿ ಜೊತೆ ಸೇರಿ ನಗರದ ಅಪಘಾತಗಳು ಆದ ಸ್ಥಳದಲ್ಲಿ ಸರ್ವೆ ಮಾಡಿದ್ದಾರೆ. ಈ ವೇಳೆ ಒಟ್ಟು 59 ಬ್ಲಾಕ್ ಸ್ಪಾಟ್ ಗಳು ಅಂತ ಗುರ್ತಿಸಿದ್ದು ಈ ಬ್ಲಾಕ್ ಸ್ಪಾಟ್ ಗಳಲ್ಲೇ‌ ಮೂರು ತಿಂಗಳಲ್ಲಿ 369 ಅಪಘಾತಗಳು ಆಗಿದೆ.ಇದ್ರಲ್ಲಿ 80ಕ್ಕೂ ಹೆಚ್ಚು ಸಾವನ್ನಪ್ಪಿದ್ದು ಹಲವು ಗಾಯಗೊಂಡಿದ್ದಾರೆ.

ಎಲ್ಲೆಲ್ಲಿ ಬ್ಲಾಕ್ ಸ್ಫಾಟ್ ಗಳು..?
 
ಏರ್ ಪೋರ್ಟ್ ರಸ್ತೆ - 11 ( ಹಬ್ಬಾಳದಿಂದ ಚಿಕ್ಕಜಾಲವರೆಗೆ)
 
ಬ್ಯಾಟರಾಯನಪುರ ( ಮೈಸೂರು ರಸ್ತೆ) - 4
 
ಚಿಕ್ಕಪೇಟೆ, ಉಪ್ಪಾರಪೇಟೆ, ಮಾರುಕಟ್ಟೆ - 3
 
ಕಾಮಾಕ್ಷಿಪಾಳ್ಯ, ತಲಘಟ್ಟಪುರ - 4
 
ಮಡಿವಾಳ, ಹುಳಿಮಾವು - 4
 
ಬೆಳ್ಳಂದೂರು, ಹೆಚ್ ಎಸ್ ಆರ್ ಲೇ ಔಟ್ - 4
 
ಎಲೆಕ್ಟ್ರಾನಿಕ್ ಸಿಟಿ - 5
 
ಯಶವಂತಪುರ, ಪೀಣ್ಯಾ - 4
 
ಕೆ ಆರ್ ಪುರಂ, ವೈಟ್ ಫೀಲ್ಡ್ , ಹಲಸೂರು - 10
 
ಜೆಬಿ ನಗರ, ಬಾಣಸವಾಡಿ, ಮಹದೇವಪುರ - 10
 
ಹೀಗೆ ನಗರದಲ್ಲಿ ಒಟ್ಟು 59 ಬ್ಲಾಕ್ ಸ್ಪಾಟ್ ಗಳನ್ನು ನಾಲ್ಕು ಇಲಾಖೆಗಳು ಸೇರಿ ಗುರ್ತಿಸಿವೆ.

ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿದ್ದು, ಅಲ್ಲಿಯೇ ಯಾಕೆ ಅಪಘಾತಗಳು ಹೆಚ್ಚಾಗ್ತಾ ಇದೆ ಅನ್ನೋ ತನಿಖೆಯನ್ನು ಸಂಚಾರಿ ಪೊಲೀಸರು ಮಾಡಿದ್ದಾರೆ. ತನಿಖೆ ವೇಳೆ ಅವೈಜ್ಞಾನಿಕ ರಸ್ತೆ ನಿರ್ಮಾಣ, ಅವೈಜ್ಞಾನಿಕ ರಸ್ತೆ ವಿಭಜಕ, ಪಾದಚಾರಿ ಮಾರ್ಗದಲ್ಲಿ ರಿಂಪಲ್ಸ್ ಅಳವಡಿಸದಿರುವುದು ಪತ್ತೆಯಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯಿಂದ ಮುಂದೆ ಅಪಘಾತ ಆಗದಂತೆ ಮಾಡಲು ಸಂಚಾರಿ ಇಲಾಖೆ ನಿರ್ಧಾರ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ