ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ನಡೀತು 14 ಅಪಘಾತಗಳು..!

ಮಂಗಳವಾರ, 22 ಆಗಸ್ಟ್ 2023 (21:00 IST)
ಬೆಂಗಳೂರಿನಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗ್ತಾನೆ ಇದೆ.‌ ಸಂಚಾರಿ ಪೊಲೀಸರು ಅಪಘಾತಗಳನ್ನು ತಡೆಯೋಕೆ ಏನೇ ಮಾಡಿದ್ರೂ ಕಡಿಮೆ ಮಾತ್ರ ಆಗ್ತಾ ಇಲ್ಲ. ಅದ್ರಲ್ಲೂ  ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 14 ಕಡೆಗಳಲ್ಲಿ ಪ್ರತ್ಯೇಕವಾಗಿ ಅಪಘಾತಗಳು ಆಗಿದೆ. ಒಟ್ಟಾರೆ ಘಟನೆಗಳಲ್ಲಿ ಸುಮಾರು 16 ಜನರು ಗಾಯಗೊಂಡಿದ್ದು 5 ಜನ ಅಪಘಾತ ಆದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 16 ಗಾಯಾಳುಗಳಲ್ಲಿ ಮೂವರ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ.

ಇನ್ನು ನಿನ್ನೆ ಹೆಬ್ಬಾಳದಲ್ಲಿ ಒಟ್ಟು ಎರಡು ಅಪಘಾತಗಳು ಆಗಿದೆ. ಅದ್ರಲ್ಲಿ ಒಬ್ಬ ಮಾತ್ರ ಬೈಕ್ ನಲ್ಲಿ ಅತಿವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ 32 ವರ್ಷದ ಯುವಕ ಸಾವು
 
ಸ್ಥಳ - ಹೆಣ್ಣೂರು
 
ಒಟ್ಟು ಅಪಘಾತಗಳು - 2
 
ನಿನ್ನೆ ರಾತ್ರಿ ಹೆಣ್ಣೂರಿನಲ್ಲಿ ಒಂದು ಸೆಲ್ಫ್ ಆಕ್ಸಿಡೆಂಟ್ ಆಗಿದ್ರೆ, ಮತ್ತೊಬ್ಬ ಆರ್ ಎಕ್ಸ್ ಬೈಕ್ ನಲ್ಲಿ ಅತಿವೇಗವಾಗಿ ಬಂದು ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ‌ಪೂನಂದಾಸ್ ಅನ್ನೋ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
 
ಸ್ಥಳ - ರಾಜಾಜಿನಗರ
 
ಒಟ್ಟು ಅಪಘಾತಗಳು - 2
 
ನಿನ್ನೆ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲೂ ಎರಡು ಅಪಘಾತಗಳು ಆಗಿದೆ. ಅದ್ರಲ್ಲಿ ಅತಿವೇಗದಿಂದ ಬೈಕ್‌ನಲ್ಲಿ ಬಂದ 19 ವರ್ಷದ ಯುವಕ ಡಿವೈಡರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌ಉಳಿದಂತೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೊಲೇರೋಗೆ ಲಾರಿ ಡಿಕ್ಕಿ ಹೊಡೆದು ಒಂದು ಸಾವಾಗಿದೆ. ಇನ್ನು ಬಸವನಗುಡಿ, ವೈಟ್ ಫೀಲ್ಡ್ , ಹುಳಿಮಾವುನಲ್ಲಿ ಎರಡೆರಡು ಅಪಘಾತಗಳಲ್ಲಿ ಕೂಡ್ಲು ಸಮೀಪ ಸೆಲ್ಫ್ ಆಕ್ಸಿಡೆಂಟ್ ಗೆ ಹೊಸರೋಡ್ ನಿವಾಸಿ ಮೋಹನ್ ಮೃತ ಪಟ್ಟಿದ್ದಾನೆ‌. ಆದ್ರೆ  ಸದಾಶಿವನಗರ, ಮೈಕೊ ಲೇ ಔಟ್ ನಲ್ಲಿ ಒಂದೊಂದು ಆಕ್ಸಿಡೆಂಟ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ