ರಕ್ಷಿಸುವವರೇ ಭಕ್ಷಕರಾದರೆ ಹೇಗೆ ? : ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ್ಲೇ 14ರ ಬಾಲಕಿ ಮೇಲೆ ರೇಪ್ !

ಬುಧವಾರ, 23 ಆಗಸ್ಟ್ 2023 (13:36 IST)
ನವದೆಹಲಿ : ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬ ತನ್ನ ಸ್ನೇಹಿತನ 14 ವರ್ಷದ ಮಗಳ ಮೇಲೆ (ಈಗ 17) ತಿಂಗಳುಗಳ ಕಾಲ ಅತ್ಯಾಚಾರವೆಸಗಿ ಆಕೆಯನ್ನ ಗರ್ಭ ಧರಿಸುವಂತೆ ಮಾಡಿದ ಆರೋಪದ ಮೇಲೆ ಸೋಮವಾರ ಪೊಲೀಸರು ಬಂಧಿಸಿದ್ದಾರೆ.
 
ಅಲ್ಲದೇ ಸಂತ್ರಸ್ತೆಗೆ ಗರ್ಭಪಾತ ಮಾತ್ರೆಗಳನ್ನ ನೀಡಿದ ಆರೋಪದ ಮೇಲೆ ಅಧಿಕಾರಿಯ ಪತ್ನಿಯನ್ನೂ ಬಂಧಿಸಲಾಗಿದೆ. ಬಂಧನದ ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆದೇಶದ ಮೇರೆಗೆ ಅಧಿಕಾರಿಯನ್ನ ಅಮಾನತುಗೊಳಿಸಲಾಗಿದೆ.

ಪ್ರೇಮೋದಯ್ ಖಾಖಾ ಮತ್ತು ಪತ್ನಿ ಸೀಮಾ ರಾಣಿ ಬಂಧಿತ ಆರೋಪಿಗಳು. ಸಂತ್ರಸ್ತ ಬಾಲಕಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, 2020ರಲ್ಲಿ ತನ್ನ ಮರಣದ ನಂತರ ಆರೋಪಿ ಪ್ರಮೋದಯ್ ಖಾಖಾ ಮತ್ತು ಅವನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು.

ಪ್ರಮೋದಯ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ. ಬಾಲಕಿಯನ್ನ ತನ್ನ ಮನೆಯಲ್ಲಿರಿಸಿಕೊಂಡೇ ನೋಡಿಕೊಳ್ಳುತ್ತಿದ್ದ. ಆಕೆ 2020ರ ಅವಧಿಯಲ್ಲಿ 12ನೇ ತರಗತಿ ಓದುತ್ತಿದ್ದಾಗ 2020-21ರ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಅತ್ಯಾಚಾರ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ