ಮೆಟ್ರೋ ಕಾಮಗಾರಿ ವೇಳೆ ಕ್ರೇನ್ ನೆಲಕ್ಕುರುಳಿರುವ ಘಟನೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ನಡೆದಿದೆ.ಕೂದಲೆಳೆ ಅಂತರದಲ್ಲಿ ಘೋರ ದುರಂತ ತಪ್ಪಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಮಗಾರಿ ನಡೆಯುತ್ತಿರುವಾಗಲೇ ರಾಜಕಾಲುವೆ ಕಬ್ಬಿಣದ ಬೇಲಿ ಮೇಲೆ ಕ್ರೇನ್ ಬಿದ್ದಿದೆ. ಕ್ರೇನ್ ಬಿದ್ದ ಸ್ಥಳದಲ್ಲಿಯೇ ಸರ್ವಿಸ್ ರಸ್ತೆ ಇದೆ.. ಕ್ರೇನ್ ಬಿದ್ದ ಪರಿಣಾಮ ಒಂದು ಭಾಗ ತುಂಡಾಗಿದೆ.. ಸರ್ವೀಸ್ ರಸ್ತೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ.. ಆದರೂ ಮೆಟ್ರೋ ಅಧಿಕಾರಿಗಳು ಯಾವುದೇ ಮುಂಜಾಗೃತಿ ಕ್ರಮ ಕೈಗೊಂಡಿಲ್ಲ.ಸ್ಥಳದಲ್ಲಿ BMRCL ಸಿಬ್ಬಂದಿಯಿಂದ ಪರಿಶೀಲನೆ ನಡೆಸಿದ್ದಾರೆ