ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್

ಸೋಮವಾರ, 9 ಅಕ್ಟೋಬರ್ 2023 (15:21 IST)
ಇಂದಿನಿಂದ ಬಹು ನಿರೀಕ್ಷೀತ ಮೆಟ್ರೋ‌ಸಂಚಾರ ಆರಂಭವಾಗಿದೆ.ವೈಟ್ ಫೀಲ್ಡ್,  ಬೈಯಪ್ಪನಳ್ಳಿ ಮಾರ್ಗ, ದಿಂದ ಕೆಂಗೇರಿ, ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲು  ಸಂಚಾರ ಆರಂಭವಾಗಿದ್ದು,ಚಲ್ಲಘಟ್ಟದಿಂದ- ವೈಟ್ ಫೀಲ್ಡ್ 37 ಸ್ಟೇಷನ್,43.49 ಕಿಲೋ ಮೀಟರ್ ,ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ 13 ಕೀ ಮಿ ವಿಸ್ತರಣೆಯಾಗಿದ್ದು,ಕೆಂಗೇರಿಯಿಂದ ಚಲಘಟ್ಟಗೆ 2.10 ಕಿ ಮೀ ವಿಸ್ತರಣೆಯಾಗಿದೆ.
 
ಬೆಂಗಳೂರಿಗರಿಗೆ ನಮ್ಮ ಮೆಟ್ರೋ ಬಿಗ್ ಗಿಫ್ಟ್ ಕೊಟ್ಟಿದೆ.ಚಲ್ಲಘಟ್ಟದಿಂದ ನೇರವಾಗಿ ವೈಟ್ ಫೀಲ್ಡ್ ಕನೆಕ್ಟ್ ಆಗಲಿದೆ.ಇನ್ಮೇಲೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಡಬಲ್ ಆಗೋ‌ ನಿರೀಕ್ಷೆ ಇದೆ.ಬೆಂಗಳೂರಿನ ಟ್ರಾಫಿಕ್ ಚಿತ್ರಣವೇ ಈ ಸಂಚಾರ ಬದಲುಮಾಡಲಿದೆ.ಐಟಿ-ಬಿಟಿ ಮಂದಿ ಕಾಯುತ್ತಿದ್ದ ಮೆಟ್ರೋ ಸಂಚಾರ ಆರಂಭವಾಗಿದ್ದು,ಬೆಳಗ್ಗೆ 5 ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ.
 
ನೇರಳೆ ಮಾರ್ಗದ ನಿಲ್ದಾಣಗಳ ನಡುವೆ ತೆಗೆದುಕೊಳ್ಳುವ ಪ್ರಯಾಣದ ಸಮಯ
 
1) ವೈಟ್‌ಫೀಲ್ಡ್‌ನಿಂದ ಪಟಂದೂರು ಅಗ್ರಹಾರದ ನಡುವೆ 10 ನಿಮಿಷಗಳು.
 
2) ಮೈಸೂರು ರಸ್ತೆಯಿಂದ ಚಲ್ಲಘಟ್ಟಕ್ಕೆ - 10 ನಿಮಿಷಗಳು.
 
3) ಪಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಗೆ 5 ನಿಮಿಷ.
 
4) ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ-ಬೆಳಗಿನ ಪೀಕ್ ಸಮಯದಲ್ಲಿ 3 ನಿಮಿಷಕ್ಕೆ ಒಂದು ರೈಲು.
 
ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 10.45ಕ್ಕೆ ಹೊರಡುತ್ತದೆ.ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ.ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ