ಮೆಟ್ರೋದಲ್ಲಿ ಗೋಬಿ ಮಂಚೂರಿ ಸವಿದಿದ್ದಕ್ಕೆ ಕೇಸ್!

ಶನಿವಾರ, 7 ಅಕ್ಟೋಬರ್ 2023 (09:42 IST)
ಬೆಂಗಳೂರು: ಇತ್ತೀಚೆಗೆ ವ್ಯಕ್ತಿಯೊಬ್ಬರು ಮೆಟ್ರೋದಲ್ಲಿ ಪ್ರಯಾಣಿಸುವಾಗ ಗೋಬಿ ಮಂಚೂರಿ ಸವಿಯುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಮೆಟ್ರೋದಲ್ಲಿ ಯಾವುದೇ ಆಹಾರ ಸೇವಿಸಬಾರದು ಎಂದು ನಿಯಮವಿದೆ. ಹಾಗಿದ್ದರೂ ನಿಯಮ ಮೀರಿ ನಡೆದುಕೊಂಡಿದ್ದಕ್ಕೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ ಬಿಎಂಆರ್ ಸಿಎಲ್ ವ್ಯಕ್ತಿಯ ವಿರುದ್ಧ 500 ರೂ. ದಂಡ ವಿಧಿಸಿದೆ.

ಗೋಬಿ ತಿನ್ನುವಾಗ ತಿನ್ನದಂತೆ ಆತನ ಸ್ನೇಹಿತರು ಹೇಳುತ್ತಿರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ. ಹಾಗಿದ್ದರೂ ಆತ ತಿನ್ನುವುದನ್ನು ಮುಂದುವರಿಸಿದ್ದ. ಈ ಬಗ್ಗೆ ಪ್ರಯಾಣಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ