ನಮ್ಮ ಮೆಟ್ರೊ' ಎರಡನೇ ಹಂತದ ಕಾಮಗಾರಿಯಡಿ ಕಂಟೋನ್ಮೆಂಟ್‌ನಿಂದ ಶಿವಾಜಿನಗರ ಮೆಟ್ರೊ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆಯುವ ಕಾರ್ಯವನ್ನು 'ವಿಂಧ್ಯಾ' ಹೆಸರಿನ ಟಿಬಿಎಂ (ಸುರಂಗ ಕೊರೆಯುವ ಯಂತ್ರ) ಯಶಸ್ವಿಯಾಗಿ ಪೂರ್ಣಗೊಳಿಸಿ ಬುಧವಾರ ಹೊರಬಂದಿದೆ.
ಇದೇ ಮಾರ್ಗಕ್ಕೆ ಮತ್ತೊಂದು ಸುರಂಗ ಕೊರೆದಿದ್ದ ಮೊದಲ ಯಂತ್ರ 'ಊರ್ಜಾ' ಸೆ.22ರಂದು ಯಶಸ್ವಿಯಾಗಿ ಹೊರಬಂದಿತ್ತು.
ಈಗ ಸಮಾನಾಂತರ ಸುರಂಗ ಮಾರ್ಗ ಕೊರೆಯಲು ತೆರಳಿದ್ದ ವಿಂಧ್ಯಾ, ಶಿವಾಜಿನಗರ ಮೆಟ್ರೊ ನಿಲ್ದಾಣದ ದಕ್ಷಿಣ ತುದಿಯಲ್ಲಿ ಹೊರಬಂದಿದೆ. ಒಟ್ಟು 855 ಮೀಟರ್ ಉದ್ದದ ಸುರಂಗ ಕೊರೆಯುವ ಕೆಲಸವನ್ನು ವಿಂಧ್ಯಾ ಪೂರ್ಣಗೊಳಿಸಿದೆ.
'ಕಂಟೋನ್ಮೆಂಟ್ ನಿಲ್ದಾಣದಲ್ಲಿ ಈ ಯಂತ್ರವನ್ನು ಮರುಜೋಡಣೆ ಮಾಡಿ, ಈ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆಯಲು ನಿಯೋಜಿಸಲಾಗುವುದು' ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಪ್ರಕಟಣೆ ತಿಳಿಸಿದೆ.