ಶಕ್ತಿ ಯೋಜನೆ ಸಮೀಕ್ಷೆಗೆ ಸಿಬ್ಬಂದಿ ನೇಮಿಸಿದ BMTC

ಗುರುವಾರ, 29 ಜೂನ್ 2023 (15:00 IST)
ಶಕ್ತಿ ಯೋಜನೆಯಿಂದ ಹೆಚ್ಚಾದ ಪ್ರಯಾಣಿಕರ ಒತ್ತಡ, ಜನರ ಬಳಿಯೇ ಅಭಿಪ್ರಾಯ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.ಶಕ್ತಿ ಸಮೀಕ್ಷೆಗಾಗಿ ಬಿಎಂಟಿಸಿಯಿಂದ 200 ಮಂದಿ ಸಿಬ್ಬಂದಿ ನೇಮಕಗೊಂಡಿದ್ದಾರೆ.ಎಲ್ಲಾ ಘಟಕಗಳಲ್ಲೂ ಜನರನ್ನ ಸಂಪರ್ಕಸಿ ಅಭಿಪ್ರಾಯ ಸಿಬ್ಬಂದಿ ಸಂಗ್ರಹ ಮಾಡಲಿದ್ದಾರೆ.ಬಳಿಕ ಅಂತಿಮವಾಗಿ BMTC MD ಗೆ ವರದಿಯನ್ನ ಸಿಬ್ಬಂದಿ ಸಲ್ಲಿಕೆ ಮಾಡಲಿದ್ದಾರೆ.
 
ವರದಿ ಆಧಾರ ಮೇಲೆ ಬಿಎಂಟಿಸಿ ಬಸ್‌ ಸೇವೆಯಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದು,ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆ, ಈ ನಿರ್ಧಾರ ಕೈಗೊಳ್ಳಲಾಗಿದೆ.ಶಕ್ತಿ ಯೋಜನೆ ಜಾರಿಗೂ ಮುನ್ನ ಬಿಎಂಟಿಸಿ ಬಸ್‌ಗಳಲ್ಲಿ ನಿತ್ಯ ಸರಾಸರಿ 25 ಲಕ್ಷ ಜನರು ಸಂಚಾರವಿತ್ತುಮಈಗ ನಿತ್ಯ ಸರಾಸರಿ 32 ಲಕ್ಷಕ್ಕೂ ಹೆಚ್ಚಿನ ಜನ ಬಿಎಂಟಿಸಿ ಬಸ್ ನಲ್ಲಿ ಸಂಚಾರ ಮಾಡ್ತಾರೆ.ಉಳಿದ ಮೂರು ನಿಗಮಗಳಿಗೆ ಹೋಲಿಕೆ ಮಾಡಿದ್ರೆ ಬಿಎಂಟಿಸಿಯಲ್ಲೇ ಪ್ರತಿನಿತ್ಯ ಹೆಚ್ಚು ಜನ ಸಂಚಾರ ಮಾಡ್ತಾರೆ.ಸದ್ಯ ಈ ಎಲ್ಲಾ ಅಂಶಗಳ ಕಾರಣ ಪ್ರಯಾಣಿಕರ ಆಗುಹೋಗುಗಳ ಅಭಿಪ್ರಾಯ ಸಂಗ್ರಹ ಮಾಡಲು ಇಲಾಖೆ ಮುಂದಾಗಿದೆ.ಕೆಲ ಬದಲಾವಣೆಗಳಿಗಾಗಿ ವರದಿ ಸಂಗ್ರಹಕ್ಕೆ ಬಿಎಂಟಿಸಿ ಮುಂದಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ