ಬೆಂಗಳೂರು : ಬಿಎಂಟಿಸಿ ನಿಗಮ ಸಾಲದ ಸುಳಿಯಲ್ಲಿ ಸಿಲುಕಿದೆ ಅಂತ ಖುದ್ದು ಸಾರಿಗೆ ಸಚಿವ ಶ್ರೀರಾಮುಲು ಒಪ್ಪಿಕೊಂಡಿದ್ದಾರೆ.
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದ್ ರಾಜು ಬದಲಾವಣೆ ಯುಬಿ ವೆಂಕಟೇಶ ಬಿಎಂಟಿಸಿ ಸಾಲದ ಬಗ್ಗೆ ಪ್ರಶ್ನೆ ಕೇಳಿದರು.
ಪ್ರಶ್ನೆಗೆ ಉತ್ತರ ನೀಡಿದ ಸಾರಿಗೆ ಶ್ರೀರಾಮುಲು ಅವರು, 5 ವರ್ಷಗಳಲ್ಲಿ ಬಿಎಂಟಿಸಿ 1,324 ಕೋಟಿ ಸಾಲ ಮಾಡಿದೆ. ಸಾಲವನ್ನು ಬಸ್ ಖರೀದಿ, ಭವಿಷ್ಯ ನಿಧಿ ಬಳಕೆ, ಸಂಸ್ಥೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಅಂತ ತಿಳಿಸಿದರು.
ಈ ಸಾಲದಲ್ಲಿ ಈಗಾಗಲೇ 679 ಕೋಟಿ ಸಾಲ ತೀರಿಸಲಾಗಿದೆ. ಉಳಿದ ಸಾಲ ಸರ್ಕಾರದಿಂದ ನಮಗೆ ಸಾಲ ಬರಬೇಕು. ಸರ್ಕಾರ ಅನುದಾನ ಕೊಟ್ಟ ಬಳಿಕ ಸಾಲ ತೀರಿಸುತ್ತೇವೆ. ಸರ್ಕಾರ ಮಕ್ಕಳು, ಕಾರ್ಮಿಕರ ಬಸ್ ಪಾಸ್ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಹಣ ಬಂದ ಕೂಡಲೇ ಸಾಲ ತೀರಿಸಲಾಗುತ್ತದೆ ಎಂದು ಹೇಳಿದರು.