ಲೇಡಿಸ್ ಸೀಟ್‍ನಲ್ಲಿ ಕೂರುವ ಮುನ್ನ ಎಚ್ಚರ !

ಗುರುವಾರ, 22 ಸೆಪ್ಟಂಬರ್ 2022 (10:15 IST)
ಬೆಂಗಳೂರು : ಬಿಎಂಟಿಸಿ ಬೆಂಗಳೂರು ನಗರದ ಸಂಚಾರ ನಾಡಿ. ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್ನಲ್ಲಿ ಸಂಚರಿಸುತ್ತಾರೆ.

ಒಂದೇ ಒಂದು ದಿನ ಬಿಎಂಟಿಸಿ ಸಂಚಾರ ಸ್ಥಗಿತವಾದರೆ ಬೆಂಗಳೂರಿಗರ ಕಷ್ಟಮಾತ್ರ ಹೇಳತೀರದಂತಿರುತ್ತದೆ.

ಈ ನಡುವೆ ಕೆಲ ಪ್ರಯಾಣಿಕರು ಸಂಚಾರ ಮಾಡುವ ಭರದಲ್ಲಿಯೋ ಅಥವಾ ತಮ್ಮ ನಿರ್ಲಕ್ಷ್ಯದಿಂದಲೋ ತಾವು ಮಾಡಿದ ಯಡವಟ್ಟಿನಿಂದಲೇ ದಂಡ ಕಟ್ಟಿದರೆ, ಮತ್ತೆ ಕೆಲವರು ಟಿಕೆಟ್ ಪಡೆಯದೇ ಬಿಟ್ಟಿಯಾಗಿ ಸಂಚಾರ ಮಾಡುವ ಕಳ್ಳಾಟದಿಂದ ತಗ್ಲಾಕೊಂಡು ಬಿಎಂಟಿಸಿ ಖಜಾನೆಗೆ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ಹಣ ತುಂಬಿಸಿದ್ದಾರೆ.ಖeಟಚಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆಗಸ್ಟ್ನಲ್ಲಿ 2,744 ಪ್ರಯಾಣಿಕರಿಂದ 4.62 ಲಕ್ಷ ರೂಪಾಯಿಗಳನ್ನು ದಂಡದ ಮೂಲಕ ಸಂಗ್ರಹಿಸಿದೆ.

ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಹಾಗೂ ಸಂಸ್ಥೆಯ ಸಾರಿಗೆ ಆದಾಯ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ತನಿಖಾ ತಂಡ ನಗರದಾದ್ಯಂತ ಆಗಸ್ಟ್ನಲ್ಲಿ 18,972 ಟ್ರಿಪ್ಗಳಲ್ಲಿ ತಪಾಸಣೆ ನಡೆಸಿತ್ತು. ಇದರಲ್ಲಿ 2,625 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ಒಟ್ಟು 4.50 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ