ಬಿಎಂಟಿಸಿಯಲ್ಲಿ ಪಾಸ್ ಖರೀದಿಸುವ ಬದಲಾಗಿ ಇನ್ಮುಂದೆ ಮೊಬೈಲ್ ಫೋನ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಿದೆ. ನಗರದ ಖಾಸಗಿ ಸಂಸ್ಥೆ ಟುಮೊಕ್ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್ ಆಯಪ್ ಪರಿಚಯಿಸುತ್ತಿರುವ ಬಿಎಂಟಿಸಿ, ಸ್ಮಾರ್ಟ್ ಫೋನ್‌ಗಳಲ್ಲೇ ಟುಮೊಕ್ ಸಂಸ್ಥೆಯ ಆಯಪ್ ಡೌನ್‌ಲೋಡ್ ಮಾಡಿಕೊಂಡು ದಿನದ ಮತ್ತು ವಾರದ ಹಾಗೂ ಮಾಸಿಕ ಪಾಸುಗಳನ್ನು ಪಡೆಯಲು ಅವಕಾಶ ನೀಡಿದೆ.
ಅಲ್ಲದೆ, ಮೊಬೈಲ್ ಆಯಪ್‌ನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್ ಟಿಕೆಟ್ ಮಿಷನ್‌ನಲ್ಲಿ ಸ್ಕ್ಯಾನ್ ಮಾಡಿ ಪ್ರಯಾಣಿಸ ಬಹುದಾಗಿದೆ. ಇದರಿಂದ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್ ಖರೀದಿಸುವ ಅಗತ್ಯವಿರುವುದಿಲ್ಲ ಎಂದು ಹೇಳಲಾಗಿದೆ.