ಪರಿಮಳಾ ಆಗ್ರೊ ಫುಡ್‌ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ: ಇಬ್ಬರು ಸಾವು

Sampriya

ಮಂಗಳವಾರ, 28 ಜನವರಿ 2025 (19:35 IST)
ತುಮಕೂರು: ನಗರ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಪರಿಮಳಾ ಆಗ್ರೊ ಫುಡ್‌ ಕಾರ್ಖಾನೆಯಲ್ಲಿ ಇಂದು ಸಂಜೆ ಬಾಯ್ಲರ್ ಸ್ಫೋಟಕ್ಕೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಬಿಹಾರದ ಸಂತೋಷ್‌ (22), ಚಂದನ್‌ ಶರ್ಮಾ (26) ಎಂದು ಗುರುತಿಸಲಾಗಿದೆ.

ಕಾರ್ಖಾನೆಯಲ್ಲಿ ಒಟ್ಟು ಐದು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ಭತ್ತದ ಹೊಟ್ಟು ಬಳಸಿ ಎಣ್ಣೆ ತಯಾರಿಸಲಾಗುತ್ತಿದೆ.

ಮೃತಪಟ್ಟ ಇಬ್ಬರು ಏಣಿ ಹತ್ತಿ ಖಾಲಿ ಬಾಯ್ಲರ್‌ ಸಿದ್ಧಪಡಿಸುತ್ತಿದ್ದರು. ಅದರ ಪಕ್ಕದಲ್ಲಿ ಎಣ್ಣೆ ತುಂಬಿದ್ದ ಮತ್ತೊಂದು ಬಾಯ್ಲರ್‌ ಸ್ಫೋಟಗೊಂಡಿದೆ.

 ಸ್ಫೋಟ ಶಬ್ದದಿಂದ ಆತಂಕಗೊಂಡು ಏಣಿಯಿಂದ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ