ವಿಧಾನಸೌಧದಲ್ಲಿ ಬಾಂಬ್ ಇಡುವುದಾಗಿ ಬಾಂಬ್ ಬೆದರಿಕೆ ಕರೆ ಬಂದಿದೆ. ಮಧ್ಯಾಹ್ನ 12.30ರ ಸುಮಾರಿಗೆ ವಿಧಾನಸೌಧ ಪೊಲಿಸ್ ಠಾಣೆಗೆ ಕರೆ ಮಾಡಿರುವ ವ್ಯಕ್ತಿ ಬಾಂಬ್ ಇಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ ಸುರೇಶ್, ನಾಗರಾಜು, ಶ್ರೀಧರ್ ಎಂಬ ಮೂವರನ್ನ ಪೊಲಿಸರು ಬಂಧಿಸಿದ್ದಾರೆ.
ನಾಗರಾಜ್ ಎಂಬ ವ್ಯಕ್ತಿ ವಿಧಾನಸೌಧ ಪೊಲೀಸ್ ಠಾಣೆಗೆ ಕೆಡ ಮಾಡಿದ್ದು, ಸೆ.25ರೊಳಗೆ ಬಾಂಬ್ ಇಟ್ಟು, ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ, ವಿಧಾನಸೌಧಕ್ಕೆ ದೌಡಾಯಿಸಿರುವ ಶ್ವಾನ ದಳ, ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸುತ್ತಿದೆ. ಕಳೆದ ಒಂದೂವರೆ ಗಂಟೆಯಿಂದ ಪರಿಶೀಲನೆ ನಡೆಸುತ್ತಿದೆ. 3ನೇ ಮಹಡಿಯಲ್ಲಿ ಪರಿಶೀಲನೆ ಮುಗಿದಿದ್ದು, 2ನೇ ಮಹಡಿಯಲ್ಲಿ ಪರಿಶೀಲನೆ ನಡೆಸುತ್ತಿದೆ.
ಬಾಂಬ್ ನಿಷ್ಕ್ರೀಯ ದಳದ ಜೊತೆ ಗುಪ್ತಚರ, ಪೊಲೀಸರ ತಂಡಗಳೂ ಪರಿಶೀಲನೆಯಲ್ಲಿ ತೊಡಗಿವೆ. ಈ ಹಿಂದೆ ಹಲವು ಬಾರಿ ಈ ರೀತಿಯ ಹುಸಿ ಕರೆಗಳು ಬಂದಿದ್ದರೂ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡವೆಂಬುದು ಒಂದೆಡೆಯಾದರೆ, ಉಗ್ರರ ದಾಳಿ ಸಂಚು ಬಗ್ಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಸೂಚನೆ ಸಹ ನೀಡಿರುವುದು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಇದರ ಜೊತೆಗೆ ಫೋನ್ ಮಾಡಿದ ವ್ಯಕ್ತಿ ಬಗ್ಗೆ ಸಹ ಮಾಹಿತಿ ಕಲೆ ಹಾಕಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ