ಆದಷ್ಟು ಶೀಘ್ರವಾಗಿ ಬಾಂಬರ್ ನನ್ನ ಹಿಡಿತ್ತಾರೆ- ಪರಮೇಶ್ವರ್

geetha

ಗುರುವಾರ, 7 ಮಾರ್ಚ್ 2024 (14:40 IST)
ಬೆಂಗಳೂರು-ರಾಜ್ಯದಲ್ಲಿ ‌ಆಸೀಡ್ ನಿಷೇಧ ಮಾಡೋ ವಿಚಾರವಾಗಿ ಎರಡು ದಿನದಲ್ಲಿ ಡಿಜಿಯಿಂದ ಸರ್ಕಾರಕ್ಕೆ,ಇಲಾಖೆಗೆ ಪತ್ರ ಬರೆಯುತ್ತಾರೆ.ಯಾರು ಬೇಕಾದ್ರೂ ಇಲ್ಲಿ ಹೋಗಿ ಬೇಕಾದ್ರೂ ಆಸೀಡ್ ಖರೀದಿ ಮಾಡಬಾರದು.ಕೆಮಿಕಲ್  ಇಂಡಸ್ಟ್ರಿ ಅವರಿಗೆ ಮಾತ್ರ ಪರ್ಮಿಷನ್ ಸಿಗಬೇಕು.ಉಳಿದಂತೆ ನಿಷೇಧ ಮಾಡಬೇಕು ಅಂತ ಪತ್ರ ಬರೆಯುತ್ತೆವೆ ಎಂದು ಪರಮೇಶ್ವರ್ ಹೇಳಿದ್ರು.
 
ನಗರದ ರಾಮೇಶ್ವರಂ ಕೆಫೆಯ  ಬಾಂಬ್ ಬ್ಲ್ಯಾಸ್ಟ್ ಕೇಸ್ ವಿಚಾರವಾಗಿ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಇನ್ನು ಕೆಲವು ಮಹತ್ವದ ಲೀಡ್ಸ್ ಸಿಕ್ಕಿದೆ.ಯಾವ ಕಡೆ ಹೋಗಿದ್ದಾರೆ. ಬಟ್ಟೆ ಬದಲಾಯಿಸಿಕೊಂಡಿರೋ ಲೀಡ್ಸ್ ಸಿಕ್ಕಿದೆ.ನಿನ್ನೆ ಮೊನ್ನೆ ಒಳ್ಳೆಯ ಲೀಡ್ಸ್ ಸಿಕ್ಕಿದೆ ಆದಷ್ಟು ಶೀಘ್ರವಾಗಿ ಆತನನ್ನು ಹಿಡಿತ್ತಾರೆ.ಬಸ್ ನಲ್ಲಿ ಪ್ರಯಾಣ ಮಾಡೋರೋದು ಗೊತ್ತಾಗಿದೆ ಎಂದು ಗೃಹ‌ಸಚಿವ ಪರಮೇಶ್ವರ್ ಹೇಳಿದ್ದಾರೆ.
 
ಬಾಂಬ್ ಬ್ಲ್ಯಾಸ್ಟ್ ಕೇಸನಲ್ಲಿ ಹಲವರ ಬಂಧನ ವಿಚಾರವಾಗಿ ತನಿಖೆಯಲ್ಲಿ ಹಲವರನ್ನು ಕರೆದು ತನಿಖೆ ನಡೆಸಲಾಗಿದೆ.ಅರೆಸ್ಟ್ ಅಂತ ಯಾವುದು ಆಗಿಲ್ಲ.ಕೆಲವರು ಅರೆಸ್ಟ್ ಅಂತ ತಿಳಿದುಕೊಂಡಿದ್ದಾರೆ.ಕೆಲವು ತನಿಖೆ ಅಂತ ತಿಳ್ಕೊಂಡಿದ್ದಾರೆ.ಸಿಎಂ ಕೂಡ ಅರೆಸ್ಟ್ ಅಂದು ಬಿಟ್ರು‌.ಅರೆಸ್ಟ್ ಅಂತ ಅಲ್ಲ, ತನಿಖೆ ನಡೆಸುತ್ತಿದ್ದಾರೆ ಅದು ಮುಂದುವರಿಯುತ್ತೆ.
 
ಕಾಂಗ್ರೆಸ್ ಚುನಾವಣೆ ‌ಸಮಿತಿ ಸಭೆ ವಿಚಾರವಾಗಿ ನಮ್ಮಲ್ಲಿ ಎರಡು ಸಭೆ ಆಗಿದೆ .ಉಸ್ತುವಾರಿ ಸುರ್ಜೆವಾಲ ಹಾಗೇ ಸ್ಕ್ರಿನಿಂಗ್ ಕಮಿಟಿ ಸಭೆ ಆಗಿದೆ.ಇಂದು ನಾಳೆ ಅಂತಿಮಗೊಳಿಸುತ್ತಾರೆ.ಅದು ದೆಹಲಿಯಲ್ಲಿ ಸೆಂಟ್ರಲ್ ಇಲೆಕ್ಷನ್ ಕಮಿಟಿಗೆ ಹೋಗುತ್ತೆ.ಎಐಸಿಸಿ‌ ಅಧ್ಯಕ್ಷರು‌ ಸೇರಿ 16 ಜನ ಇದ್ದಾರೆ.ನಮ್ಮ ರಾಜ್ಯದಿಂದ ಜಾರ್ಜ್ ಅವರು ಇದ್ದಾರೆ.ಖರ್ಗೆ ಅವರೇ ಅಧ್ಯಕ್ಷರು ಆಗಿರೋದ್ರಿಂದ ಸುಲಭ.ಒಂದೇ ಪಟ್ಟಿಯಲ್ಲಿ ಎಲ್ಲಾ ಬಿಡುಗಡೆ ‌ಮಾಡ್ತಾರೆ ಅಂತ ಹೇಳ್ತಾ ಇದ್ರು.ಬೇರೆ ಪಕ್ಷದಿಂದ ಬರೋರೂ ಇದ್ದಾರೆ ಹೀಗಾಗಿ ಸ್ವಲ್ಪ ಹೋಲ್ಡ್ ಮಾಡಬಹುದು.ಎರಡನೇ ಪಟ್ಟಿಯಲ್ಲಿ ಬಿಡಬಹುದು ಎಂದು ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ