ಬೆಂಗಳೂರು-ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕೂಡ ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿದೆ. ಈ ಹಿಂದೆ ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಮೇಲೆ ಸಂದೇಶ ಬಂದಿತ್ತು. ಇಂತಹ ಕೇಸ್ ಗಳನ್ನು ಭೇದಿಸುವುದಕ್ಕೆ ಸ್ವಲ್ಪ ಕಷ್ಟ ಆಗುತ್ತದೆ ಎಂದರು. ಬೇರೆ ದೇಶದ ಏಜೆನ್ಸಿಗಳು ಸಪೋರ್ಟ್ ಮಾಡುತ್ತಿಲ್ಲ. ಫೇಸ್ಬುಕ್, ಗೂಗಲ್ ಅಂತ ಕಂಪನಿಗಳು ಸಹಕರಿಸುವುದಿಲ್ಲ. ಅಂತಹ ಕಂಪನಿ ಸಹಕರಿಸಿದರೆ ಸುಲಭವಾಗಿ ಕೇಸ್ ಅನ್ನು ಭೇದಿಸಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಈಗ ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಪ್ರಕರಣವನ್ನು ಭೇದಿಸುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಬುಧವಾರ ಹೇಳಿದ್ದಾರೆ.ಕಳೆದ ಎರಡು ದಿನಗಳಲ್ಲಿ ಪೊಲೀಸರಿಗೆ ಕೆಲವು ಮಹತ್ವದ ಸುಳಿವು ಸಿಕ್ಕಿದ್ದು, ಅವು ಪ್ರಕರಣ ಭೇದಿಸುವ ಭರವಸೆ ಮೂಡಿಸಿವೆ ಎಂದು ಪರಮೇಶ್ವರ್ ಅವರು ಇಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.