ಬೆಣ್ಣೆತೋರಾ ಜಲಾಶಯ ಒಳಹರಿವು ಹೆಚ್ಚಳ: ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ

ಭಾನುವಾರ, 24 ಜೂನ್ 2018 (22:50 IST)
ಬೆಣ್ಣೆತೋರಾ ಜಲಾಶಯ ಒಳಹರಿವು ಹೆಚ್ಚಳ:
ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ
ಕಲಬುರಗಿ: ಜಿಲ್ಲೆಯ ಬೆಣ್ಣೆತೋರಾ ಜಲಾಶಯದ ಒಳ ಹರಿವು ಹೆಚ್ಚುತ್ತಿರುವ ಪರಿಣಾಮ ಜಲಾಶಯವು ಭರ್ತಿಯಾಗುತ್ತಿದ್ದು, ಹೆಚ್ಚುವರಿಯಾಗಿ ಬರುವ ನೀರನ್ನು ಕೋಡಿಯ ಬಾಗಿಲುಗಳ ಮೂಲಕ ಮುನ್ಸೂಚನೆ ಇಲ್ಲದೆ ಯಾವುದೇ ಸಮಯದಲ್ಲಿ ನದಿಗೆ ನೀರನ್ನು ಬಿಡಲಾಗುವುದರಿಂದ ನದಿಯ ಎರಡು ದಂಡೆಯಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗ-4ರ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

                ಬೆಣ್ಣೆತೋರಾ ಯೋಜನೆಯ ಕೆಳಭಾಗದಲ್ಲಿ ವಾಸಿಸುವಂತಹ ರೈತರು, ಸಾರ್ವಜನಿಕರು, ರೈತ ಮಹಿಳೆಯರು, ದನ-ಕರುಗಳನ್ನು ಮೇಯಿಸುವವರು ಈ ಸಮಯದಲ್ಲಿ ಹಳ್ಳದಲ್ಲಿ ಇಳಿಯುವುದಾಗಲಿ, ಬಟ್ಟೆ ತೊಳೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದೆಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ