ಕಾಂಗ್ರೆಸ್, ಜೆಡಿಎಸ್ ಪಕ್ಷಗಳೆರಡೂ ಮುಳುಗ್ತಿರುವ ಹಡಗುಗಳು- ಸಚಿವ ಈಶ್ವರಪ್ಪ

ಭಾನುವಾರ, 22 ಸೆಪ್ಟಂಬರ್ 2019 (14:53 IST)
ಮೈಸೂರು : ಕಾಂಗ್ರೆಸ್, ಜೆಡಿಎಸ್ ಪಕ್ಷಗಳೆರಡೂ ಮುಳುಗ್ತಿರುವ ಹಡಗುಗಳು. ಉಪಚುನಾವಣೆಯಲ್ಲೂ ಜನರು ಅವರನ್ನು ತಿರಸ್ಕರಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.




ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡದ ಅವರು, ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಬೇಕು ಎಂದು ಹೇಳುತ್ತಾರೆ. ದಿನೇಶ್ ಗುಂಡೂರಾವ್ ಮೈತ್ರಿ ಬೇಡವೆಂದು ಹೇಳುತ್ತಾರೆ. ಜೆಡಿಎಸ್ ಪಕ್ಷದಲ್ಲೀ ಅದೇ ಪರಿಸ್ಥಿತಿ ಇದೆ ಎಂದ ಅವರು, ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ. ತಾನು ಪಕ್ಷಾಂತರದಲ್ಲಿ ನಿಸ್ಸೀಮ, ಬೇರೆಯವ್ರಿಗೆ ಬುದ್ದಿ ಹೇಳ್ತಾರೆ. ಅವರು ಜೆಡಿಎಸ್ ಗೆ ದ್ರೋಹ ಮಾಡಿ ಕಾಂಗ್ರೆಸ್ ಗೆ ಹೋದ್ರು. ಅವರಿಗೆ ಅನರ್ಹರ ಬಗ್ಗೆ ಮಾತನಾಡಲು ಏನು ಅರ್ಹತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಅನರ್ಹರ ಪಟ್ಟ ಶಾಸಕರಿಗೆ ಇವತ್ತಿಗಷ್ಟೇ. ಅವರು ಏನಾಗ್ತಾರೆಂದು ಸೋಮವಾರದವರೆಗೆ ಕಾದು ನೋಡಿ. ಶಾಸಕರ ಅನರ್ಹತೆ ಬಗ್ಗೆ ಪರಾಮರ್ಶಿಸಲು ಸುಪ್ರೀಂ ತಿಳಿಸಿತ್ತು. ಆದ್ರೆ ರಮೇಶ್ ಕುಮಾರ್ ತಾವೇ ಸಂವಿಧಾನದ ತಜ್ಞ ಎಂದು ಶಾಸಕರನ್ನ ಅನರ್ಹ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ