ಬೆಳಗಾವಿ ನಗರದಲ್ಲಿ ಸೆಪ್ಟೆಂಬರ್ 25ರಂದು ನಡೆದ ಘಟನೆ ಇದು. ರಾಮತೀರ್ಥ ನಗರದ ನಿವಾಸಿ ವಿಶಾಲ್ ಎಂಬಾತ ರಾತ್ರಿ 10 ಗಂಟೆ ಸುಮಾರಿಗೆ ಜಿಲ್ಲಾ ಸ್ಟೇಡಿಯಂ ಬಳಿ ತನ್ನ ಸ್ನೇಹಿತಿಗಾಗಿ ಕಾಯುತ್ತಿದ್ದ. ರಾತ್ರಿಯಾಗಿದ್ದರಿಂದ ಜನಸಂಚಾರವೂ ವಿರಳವಾಗಿತ್ತು. ಇನ್ನೇನು ಸ್ನೇಹಿತ ಅಲ್ಲಿಗೆ ಬರಬೇಕು ಎನ್ನುವಷ್ಟರಲ್ಲಿ ಆತನ ಬಳಿ ಬಂದ ನಾಲ್ವರು ಪುಂಡರು ಕುಡಿಯಲು ಹಣ ಬೇಕು ನೀಡು ಎಂದು ಒತ್ತಾಯಿಸಿದ್ದಾರೆ. ಆದರೆ ತನ್ನ ಬಳಿ ಕೇವಲ 50 ರೂಪಾಯಿ ಇದ್ದುದರಿಂದ ವಿಶಾಲ್ ಹಣ ಕೊಡಲು ನಿರಾಕರಿಸಿದ್ದಾನೆ.