ಪ್ರಿಯತಮೆಗೆ ಗರ್ಭಪಾತದ ಬದಲು ವಿಷದ ಮಾತ್ರೆ ನೀಡಿದ ಕಿರಾತಕ!

ಮಂಗಳವಾರ, 2 ಆಗಸ್ಟ್ 2016 (11:23 IST)
ಗರ್ಭಪಾತಕ್ಕಾಗಿ ಪ್ರಿಯತಮ ನೀಡಿದ ಮಾತ್ರೆ ಸೇವಿಸಿ ಪ್ರಿಯತಮೆ ಸಾವನ್ನಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರ ತಾಲೂಕಿನ ವೀರಗೊಲ್ಲನಹಳ್ಳಿಯಲ್ಲಿ ನಡೆದಿದೆ.
 
ವೀರಗೊಲ್ಲನಹಳ್ಳಿ ನಿವಾಸಿಯಾಗಿರುವ ನರೇಶ್ ಹಾಗೂ ಗೀತಾ ಪರಸ್ವರ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗಷ್ಟೇ ಗೀತಾ ಗರ್ಭಿಣಿಯಾಗಿದ್ದಳು. ಗರ್ಭಪಾತವನ್ನು ತಡೆಯಲು ಪ್ರಿಯತಮ ನರೇಶ್ ನೀಡಿದ್ದ ವಿಷದ ಮಾತ್ರೆ ಸೇವಿಸಿ ಪ್ರಿಯತಮೆ ಗೀತಾ (21) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದುರಂತ ಅಂತ್ಯ ಕಂಡಿದ್ದಾಳೆ.
 
ತನ್ನ ಮಗಳ ಸಾವಿಗೆ ಆಕೆಯ ಪ್ರಿಯತಮನೇ ಕಾರಣ ಎಂದು ಗೀತಾ ಪೋಷಕರು ಆರೋಪಿ ನರೇಶ್ ಮನೆ ಎದುರು ಪ್ರತಿಭಟನೆ ನಡೆಸಿದ್ದು, ಆರೋಪಿ ನರೇಶ್ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
 
ಗರ್ಭಪಾತಕ್ಕಾಗಿ ವಿಷದ ಮಾತ್ರೆ ನೀಡಿದ್ದ ಎನ್ನುವ ಆರೋಪ ಹೊತ್ತಿರುವ ನರೇಶ್ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ