ರಾಜ್ಯದಾದ್ಯಂತ ಬಿಪಿಎಲ್ ಕಾರ್ಡ್ ಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಜನ ಸೈಬರ್ ಸೆಂಟರ್ ಗಳತ್ತ ಮುಖ ಮಾಡುತ್ತಿದ್ದಾರೆ, ಆದ್ರೆ ಬಿಬಿಎಲ್ ಅಪ್ಲಿಕೇಶನ್ ಕ್ಲೋಸ್ ಆಗಿದೆ .ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಜನ ಸೈಬರ್ ಸೆಂಟರ್ ಗಳತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ, ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ್ದ ಐದು ಗ್ಯಾರಂಟಿಗಳ ಲಾಭವನ್ನ ಪಡೆಯಲು ಜನ ಉತ್ಸುಕರಾಗಿದ್ದಾರೆ. ಇದೀಗಾ ಜನ
ಬಿಪಿಎಲ್ ಕಾರ್ಡ್ ಮಾಡಿಸಲು ಸೈಬರ್ ಸೆಂಟರ್ ಗಳಲ್ಲಿ ಮುಗಿಬೀಳುತಿದ್ದಾರೆ.
ನಿತ್ಯ ೨೦ ರಿಂದ ೩೦ ಜನ ಒಂದೊಂದು ಸೈಬರ್ ಸೆಂಟರ್ ಗಳಿಗೆ ಅರ್ಜಿ ಹಾಕಲು ಬರ್ತಿದ್ದಾರೆ. ಹೊಸ ಕಾರ್ಡ್ ಮಾಡಿಸಲು ಜನ ಬೆಂಗಳೂರು ಒನ್ ಹಾಗೂ ಸೈಬರ್ ಸೆಂಟರ್ಗೆ ಧಾವಿಸುತ್ತಿದ್ದಾರೆ. ಆದ್ರೆ, ಸರ್ಕಾರದಿಂದ ಹೊಸ ರೇಷನ್ ಕಾಡ್೯ಗೆ ಅರ್ಜಿ ಸಲ್ಲಿಸಲು ಇನ್ನು ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ವಾಪಾಸ್ ಮರಳುತ್ತಿದ್ದಾರೆ. ಇನ್ನೂ ಕೆಲವು ಸೈಬರ್ ಸೆಂಟರ್ ಮಾಲೀಕರು ಕೂಡ ಹೊಸ ಅರ್ಜಿಗಳಿಗೆ ಅವಕಾಶ ನೀಡಿದೆಯೋನೋ ಅಂತ ಇಲಾಖಾ ವೆಬ್ ಸೈಟ್ ಓಪನ್ ಮಾಡಿ ಪರಿಶೀಲಿಸ್ತಿದ್ದಾರೆ.