ಸರ್ಕಾರದ ಗ್ಯಾರಂಟಿ ಹೊರೆಯಿಂದ ಬಡವರ ಬಿಪಿಎಲ್‌ ಕಾರ್ಡ್‌ಗೆ ಬರೆ: ಜೆಡಿಎಸ್‌ ಆಕ್ರೋಶ

Sampriya

ಗುರುವಾರ, 21 ನವೆಂಬರ್ 2024 (17:42 IST)
ಬೆಂಗಳೂರು: ರಾಜ್ಯದಲ್ಲಿ ವಚನ ಭ್ರಷ್ಟ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ತೊಘಲಕ್‌ ಆಡಳಿತದ ಹುಚ್ಚಾಟಗಳು ಮಿತಿಮೀರಿದೆ ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಯಾವುದೇ ರೀತಿಯ ಸೂಕ್ತ ದಾಖಲೆಗಳ ಪರಿಶೀಲನೆ ಮಾಡದೇ ಏಕಾಏಕಿ 22 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು  ಕಾನ್ಸಲ್‌ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ನಡೆ ಎಂದು ಹೇಳಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜೆಡಿಎಸ್ ಪೋಸ್ಟ್ ಹಾಕಿದೆ: ರಾಜ್ಯದಲ್ಲಿ ವಚನ ಭ್ರಷ್ಟ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್
 ಸರ್ಕಾರದ ತೊಘಲಕ್‌ ಆಡಳಿತದ ಹುಚ್ಚಾಟಗಳು ಮಿತಿಮೀರಿದೆ.


ಯಾವುದೇ ರೀತಿಯ ಸೂಕ್ತ ದಾಖಲೆಗಳ ಪರಿಶೀಲನೆ ಮಾಡದೇ ಏಕಾಏಕಿ 22 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು  ಕಾನ್ಸಲ್‌ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ನಡೆ.

22 ಲಕ್ಷ ಕಾರ್ಡ್‌ ರದ್ದು ಮಾಡುವ ಮೊದಲು ಅನರ್ಹರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆಯೇ ? ಅನರ್ಹರು ಎಂದು ಯಾವೆಲ್ಲಾ ಮಾನದಂಡಗಳ ಮೇಲೆ ಪರಿಗಣಿಸಲಾಯಿತು ?

ದಿನಕ್ಕೊಂದು ಆದೇಶಗಳು,  ಗಂಟೆಗೆ ಒಬ್ಬರಂತೆ ಸಚಿವರಿಂದ ಸಮರ್ಥನೆ.

 ಸರ್ಕಾರಿ ನೌಕರರು ಮತ್ತು ತೆರಿಗೆದಾರರ ಬಿಪಿಎಲ್‌ ಕಾರ್ಡ್‌ಗಳನ್ನಷ್ಟೇ ರದ್ದು ಮಾಡಿದ್ದೇವೆ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ, ಇನ್ನುಳಿದ ಬಡವರ ಕಾರ್ಡ್‌ಗಳನ್ನು ಏಕಾಏಕಿ ರದ್ದು ಮಾಡುವ ಅನಿವಾರ್ಯತೆ ಏನಿತ್ತು ?   

ಈಗ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೇ ಮರುಳಿಸಬೇಕು ಎಂದು ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಿರುವುದನ್ನು ಗಮನಿಸಿದರೇ ಉದ್ದೇಶ ಪೂರ್ವಕವಾಗೇ ಬಡವರ ಅನ್ನಕ್ಕೆ ಸರ್ಕಾರ ಕಲ್ಲು ಹಾಕಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಹೊರೆಯಿಂದ, ಲಕ್ಷಾಂತರ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ