ರಾಜ್ಯದಲ್ಲಿ ಈ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್‌

Sampriya

ಬುಧವಾರ, 20 ನವೆಂಬರ್ 2024 (19:12 IST)
Photo Courtesy X
ಬೆಂಗಳೂರು: ಸದ್ಯ ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದು ಮಾಡುತ್ತಿರುವ ಪ್ರಕ್ರಿಯೆ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಶಾಕಿಂಗ್ ವಿಚಾರವೊಂದು ಬಯಲಾಗಿದೆ. ಬಿಪಿಎಲ್ ಕಾರ್ಡ್ ಆಪರೇಷನ್ ವೇಳೆ ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ದಾರರು ಇರುವುದು ಬೆಳಕಿಗೆ ಬಂದಿದೆ.

ಕಳೆದ ಆಗಸ್ಟ್​ ತಿಂಗಳಿನಲ್ಲೇ ಆಹಾರ ಇಲಾಖೆಗೆ ಇ ಗವರ್ನೆನ್ಸ್​ ಇಲಾಖೆ ಮಾಹಿತಿ ಕೊಟ್ಟಿದೆ. ಇದೇ ಮಾಹಿತಿ ಇಟ್ಟುಕೊಂಡೇ 22 ಲಕ್ಷ ಅನರ್ಹ ಬಿಪಿಎಲ್​ ಕಾರ್ಡ್​​ಗಳ ರದ್ದಾಗಲಿದೆಯೇ ಎಂಬ ಅನುಮಾನ ಈಗ ಮೂಡಿದೆ.

ಇನ್ನೂ ಅತೀ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್‌ದಾರರು ಇರುವುದು ಕಲಬುರಗಿಯಲ್ಲಿ ಎಂದು ತಿಳಿದುಬಂದಿದೆ.  ಕಲಬುರಗಿಯಲ್ಲಿ 78,058 ಮಂದಿ ಅನರ್ಹರಿಗೆ ಬಿಪಿಎಲ್ ಕಾರ್ಡ್​ ನೀಡಲಾಗಿದೆ.  ಬೆಂಗಳೂರಿನಲ್ಲಿ ಒಟ್ಟು 65,563 ಅನರ್ಹರ ಬಳಿ ಬಿಪಿಎಲ್ ಕಾರ್ಡ್​ ಇದೆ. ಬೆಂಗಳೂರು ಪೂರ್ವದಲ್ಲಿ 9,129 ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಬೆಂಗಳೂರು ಉತ್ತರದಲ್ಲಿ 17,382 ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ 11,447 ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.


ಇದೀಗ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್ ರದ್ದು ಪ್ರಕ್ರಿಯೆ ಜೋರು ಸದ್ದು ಮಾಡುತ್ತಿದ್ದು, ಬಡವರಿಗೆ ಬಿಪಿಎಲ್ ಕಾರ್ಡ್ ಸಿಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ