ಜಿಲ್ಲೆಯಾದ್ಯಾಂತ ದೇವಸ್ಥಾನಗಳ ಕಾಮಗಾರಿಗಳಿಗೆ ಬ್ರೇಕ್

ಶುಕ್ರವಾರ, 18 ಆಗಸ್ಟ್ 2023 (15:43 IST)
ಬೆಂಗಳೂರು : ದೇವಸ್ಥಾನಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿದ ಅನುದಾನಕ್ಕೆ ಬ್ರೇಕ್ ಹಾಕಿದ್ದ ರಾಜ್ಯ ಸರ್ಕಾರ ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.

ಮುಜರಾಯಿ ಇಲಾಖೆ ಆಯುಕ್ತ ಬಸವರಾಜೇಂದ್ರ, ಸಚಿವರ ಗಮನಕ್ಕೆ ಬಾರದೇ ಈ ಆದೇಶ ಪ್ರಕಟಿಸಲಾಗಿತ್ತು. ಈಗ ಆದೇಶವನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಾಂತ ಮುಜರಾಯಿ ವ್ಯಾಪ್ತಿಯ ಕಾಮಗಾರಿಗಳು ನಡೆಯುತ್ತಿತ್ತು. ಈ ಕಾಮಗಾರಿ ಮಾಡಲು 50% ಅನುದಾನವನ್ನು ಬಿಡುಗಡೆ ಮಾಡಿ ತಡೆ ಹಿಡಿಯಲಾಗಿತ್ತು. ನಮ್ಮ ವ್ಯಾಪ್ತಿಯಲ್ಲಿ ನಾವು ಆದೇಶ ಹೊರಡಿಸಿದ್ದೆವು. ಈಗ ಮತ್ತೊಂದು ಆದೇಶವನ್ನು ಪ್ರಕಟಿಸಿದ್ದೇವೆ ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ