ನನ್ನ ತಂದೆಯು ತಮ್ಮ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಅವರ ಕನಸಾಗಿತ್ತು; ಆದರೆ ಅವರಿಗೆ ಅದು ನೋಡಲು ಸಾಧ್ಯವಾಗಲಿಲ್ಲ. ಆದರೂ ಅವರ ಮೃತ್ಯು ನಂತರ ಅವರ ಅಸ್ತಿ ಅವರ ಪ್ರಾಣ ಪ್ರಿಯ ದೇಶಕ್ಕೆ ಮುಟ್ಟಬೇಕು, ಎಂದು ನೇತಾಜಿ ಸುಭಾಷ ಚಂದ್ರ ಬೋಸ ಅವರ ಏಕೈಕ ಪುತ್ರಿ ಅನಿತಾ ಬೋಸ ಇವರು ಭಾವನೆಯನ್ನು ಒಂದು ಸಂದರ್ಶನದಲ್ಲಿ ವ್ಯಕ್ತ ಪಡಿಸಿದರು. ಜನವರಿ ೨೩ ರಂದು ನೇತಾಜಿ ಬೋಸ ಅವರ ಜಯಂತಿ ಇದೆ.
ಅನಿತಾ ಬೋಸ ತಮ್ಮ ಮಾತನ್ನು ಮುಂದುವರೆಸುತ್ತಾ, ನೇತಾಜಿ ಸುಭಾಷ ಚಂದ್ರ ಬೋಸ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ನೀಡಿರುವ ಯೋಗದಾನವನ್ನು ಉದ್ದೇಶ ಪೂರ್ವಕ ನಿರ್ಲಕ್ಷಿಸಲಾಯಿತು. ಕಾಂಗ್ರೆಸನ ರಾಜಕೀಯದ ಷಡ್ಯಂತ್ರದ ಒಂದು ಭಾಗವೆಂದು ದೇಶದ ಸ್ವಾತಂತ್ರ್ಯದ ಸಂಪೂರ್ಣ ಶ್ರೇಯಸ್ಸನ್ನು ಅಹಿಂಸಾತ್ಮಕ ಆಂದೋಲನಕ್ಕೆ ನೀಡಿದೆ; ಆದರೆ ಆಜಾದ್ ಹಿಂದ ಸೇನೆಯ ಸೈನಿಕರ ಹೋರಾಟದಿಂದ ಬ್ರಿಟೀಷ ಸರಕಾರ ಹೆದರಿತ್ತು. ಆದ್ದರಿಂದ ಇನ್ನು ಮುಂದೆ ಭಾರತದ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟಸಾಧ್ಯವೆಂದು ಅರಿವು ಬ್ರಿಟಿಷ ಸರಕಾರಕ್ಕೆ ಆಗಿತ್ತು. ಈ ಹೇಳಿಕೆಗೆ ಪುಷ್ಟಿ ನೀಡುವ ಹಲವಾರು ದಾಖಲೆಗಳು ಉಪಲಬ್ಧವಿದೆ.
ನೇತಾಜಿ ಸುಭಾಷ ಚಂದ್ರ ಬೋಸ ಇವರ ಮೃತ್ಯುವಿನ ವಿವಾದಕ್ಕೆ ಎಳ್ಳು ನೀರು ಬಿಡಬೇಕು. ನೇತಾಜಿಯವರ ಮೃತ್ಯುಕ್ಕಿಂತ ಅವರ ಜೀವನ ಕಾರ್ಯ, ದೇಶಪ್ರೇಮದ ವಿಚಾರ ಎಷ್ಟೋ ದೊಡ್ಡದಾಗಿದೆ. ಅವರ ನೆನಪು ಇಟ್ಟುಕೊಳ್ಳುವ ಅವಶ್ಯಕತೆ ಇರುವುದಾಗಿ ಹೇಳಿದರು ಅನಿತಾ ಬೋಸ.