ಮೋಜು, ಮಸ್ತಿ, ನಶೆಯಲ್ಲಿ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಶಾಸಕರ ಸಹೋದರರು
ಗುರುವಾರ, 2 ಜನವರಿ 2020 (14:01 IST)
ಮಾಜಿ ಶಾಸಕರ ಸಹೋದರರೊಬ್ಬರು ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಗೆ ಬೈದು, ಹಲ್ಲೆಗೆ ಯತ್ನಿಸಿರೋ ಘಟನೆ ನಡೆದಿದೆ.
ಮಂಡ್ಯದ ಕೃಷ್ಣರಾಜಪೇಟೆ ಪಟ್ಟಣದ ಟೌನ್ ಕ್ಲಬ್ ನಲ್ಲಿ ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಡಿದ ಮತ್ತಿನಲ್ಲಿ ಕರ್ತವ್ಯನಿರತ ಸಬ್ ಇನ್ಸ್ ಪೆಕ್ಟರ್ ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಅವಮಾನಿಸಿ, ಹಲ್ಲೆಗೆ ಮುಂದಾಗಿದ್ದಾರೆ ಮಾಜಿ ಶಾಸಕರ ಸಹೋದರರು.
ಟೌನ್ ಕ್ಲಬ್ ಅಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್ ಮತ್ತು ಪಿಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಬಿ.ರವಿ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದಗಳಲ್ಲಿ ನಿಂದಿಸಿರುವ ಬಗ್ಗೆ
ಕಲಂ 504, 506, 353, 54 ಅಡಿಯಲ್ಲಿ ಎಫ್.ಐ.ಆರ್ ದಾಖಲು ಮಾಡಿದ್ದಾರೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ.
ಬೆಳಗಿನ ಜಾವ 2.15 ಕಳೆಯುತ್ತಿದ್ದರೂ ಟೌನ್ ಕ್ಲಬ್ ನಲ್ಲಿ ಕುಡಿದು ಮೋಜು ಮಸ್ತಿ ನಡೆಸುತ್ತಿದ್ದರು ಮಾಜಿ ಶಾಸಕರ ಸಹೋದರರು. ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಠಾಣಾಧಿಕಾರಿ ಬಸವರಾಜು ಅವರಿಂದ ಎಫ್.ಐ.ಆರ್ ದಾಖಲಾಗಿದೆ.