ಕೇವಲ 2 ಎಕರೆಗಾಗಿ ತಂದೆ, ಮಲತಾಯಿಯನ್ನು ಹತ್ಯೆ ಮಾಡಿದ ಕ್ರೂರಿ ಮಗ, ಕೊನೆಗೂ ಅರೆಸ್ಟ್‌

Sampriya

ಶನಿವಾರ, 11 ಜನವರಿ 2025 (18:09 IST)
ಹುಬ್ಬಳ್ಳಿ: ಆಸ್ತಿ ಆಸೆಗಾಗಿ ತಂದೆ ಹಾಗೂ ಮಲತಾಯಿಯನ್ನು ಕೊಲೆ ಮಾಡಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗಂಗಾಧರ ಎಂದು ಗುರುತಿಸಲಾಗಿದೆ. ಶುಕ್ರವಾರ ಹುಬ್ಬಳ್ಳಿಯ ಕುಸಗುಲ್ ಗ್ರಾಮದಲ್ಲಿ ಅಶೋಕ್ ಹಾಗೂ ಶಾರದಾ ಎಂಬವರನ್ನು ಆರೋಪಿ ಕೊಲೆ ಮಾಡಿದ್ದ.

ತನಿಖೆಯಲ್ಲಿ ಆಸ್ತಿಯ ಆಸೆಯಿಂದ ತಂದೆ ಹಾಗೂ ಮಲತಾಯಿಯನ್ನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಕೇವಲ ಎರಡು ಎಕರೆ ಜಮೀನಿಗಾಗಿ ಹೆತ್ತವರನ್ನೇ ಆರೋಪಿ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿ ಕೊಲೆ
ಮಾಡಿದ್ದ. ಹತ್ಯೆ ಬಳಿಕ ಆರೋಪಿ ಸ್ಥಳದಿಂದ ಎಸ್ಕೇಪ್‌ ಆಗಿದ್ದ. ಕೊಲೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಕೊಲೆ ನಡೆದ ಸ್ಥಳದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ