ಅನರ್ಹ ಶಾಸಕರಿಗೆ ತೊಡಕಾಗಬಹುದಾಗಿದ್ದ ದಾರಿಯನ್ನು ಸಲೀಸು ಮಾಡೋ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಹೆಣೆದಿರೋ ಈ ತಂತ್ರದಿಂದ ಅನರ್ಹ ಶಾಸಕರು ಫುಲ್ ಖುಷ್ ಆಗಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಅನರ್ಹ ಶಾಸಕರ ಬದಲಿಗೆ ನಮಗೆ ಟಿಕೆಟ್ ಬೇಕು ಅಂತ ಬಂಡಾಯ ಎದ್ದಿದ್ದ ಕೂಗನ್ನು ಸೈಲೆಂಟ್ ಮಾಡಲಾಗಿದೆ.
ಬಂಡಾಯದ ಬಾವುಟ ಹಾರಿಸಿದ್ದವರಿಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದೆ. ಆ ಮೂಲಕ ಅನರ್ಹ ಶಾಸಕರು ಸ್ಪರ್ಧೆ ಮಾಡೋದಕ್ಕೆ ಲೈನ್ ಕ್ಲೀಯರ್ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ವ್ಯತಿರಿಕ್ತವಾದರೆ ಅನರ್ಹ ಶಾಸಕರ ಸಂಬಂಧಿಗಳಿಗೆ ಟಿಕೆಟ್ ದೊರಕಲಿದೆ.
ಶರತ್ ಬಚ್ಚೇಗೌಡ - ಕರ್ನಾಟಕ ಗೃಹ ಮಂಡಳಿ
ಯು. ಬಿ. ಬಣಕಾರ್ - ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣಾ ನಿಗಮ
ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ - ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ
ನಂದೀಶ್ ರೆಡ್ಡಿ - ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಟಿಸಿ) ಸಂಸ್ಥೆ
ರಾಜು ಕಾಗೆ - ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ
ಹೆಚ್.ಆರ್.ಗವಿಯಪ್ಪ - ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
ವಿ.ಎಸ್. ಪಾಟೀಲ್ - ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧ್ಯಕ್ಷ ಸ್ಥಾನ.