ಡಿಕೆ ಶಿವಕುಮಾರ್ ಹೇಳಿಕೆಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ಬಿಎಸ್ ಯಡಿಯೂರಪ್ಪ
‘ಬೀದರ್ ನ ಐದು ಶಾಸಕರಲ್ಲಿ ನಾಲ್ವರೂ ಕಾಂಗ್ರೆಸ್ ನವರೇ. ಹೀಗಾಗಿ ಈ ಕಾರಣಕ್ಕೆ ಇಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು ಎಂದರೆ ಒಪ್ಪುವ ಮಾತಲ್ಲ. ಕಾಂಗ್ರೆಸ್ ಸೋಲಿಗೆ ಬೇರೆಯದೇ ಕಾರಣಗಳಿವೆ. ಡಿಕೆಶಿ ಹೇಳಿಕೆಯೇ ವಿಚಿತ್ರವಾಗಿದೆ’ ಎಂದು ಯಡಿಯೂರಪ್ಪ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಂದೆಡೆ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ವಹಿಸಿದ್ದ ಶಾಸಕ ಎಂಬಿ ಪಾಟೀಲ್ ಡಿಕೆಶಿ ಎಲ್ಲಾ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರು ರಾಹುಲ್ ಗಾಂಧಿಗಿಂತ ದೊಡ್ಡವರಲ್ಲ. ಈ ಬಗ್ಗೆ ಹೈಕಮಾಂಡ್ ಗೆ ವರದಿ ನೀಡುವೆ ಎಂದು ಕಿಡಿ ಕಾರಿದ್ದಾರೆ. ಅಂತೂ ಸುಖಾಸುಮ್ಮನೇ ಡಿಕೆಶಿ ವಿವಾದವೊಂದನ್ನು ಮೈಮೇಲೆಳೆದುಕೊಂಡಂತಾಗಿದೆ.