BSY ನಂತರ ನಾನೇ ಡೈನಾಮಿಕ್ ಲೀಡರ್ ಎಂದ ಶಾಸಕ

ಮಂಗಳವಾರ, 7 ಮೇ 2019 (20:44 IST)
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಟವೆಲ್ ಹಾಕಿದ್ದೇನೆ. ಉತ್ತರ ಕರ್ನಾಟಕದಿಂದ ಸಿಎಂ ಆಗಲು ನನಗೂ ಅರ್ಹತೆ ಇದೆ. ಹೀಗಂತ ಬಿಜೆಪಿ ಶಾಸಕ ಹೇಳಿದ್ದಾರೆ.


ಸಚಿವ ಎಂ.ಬಿ. ಪಾಟೀಲ್ ಗೆ ಕಾಂಗ್ರೆಸ್ ನಿಂದ ಅನ್ಯಾಯವಾದಗಲೆಲ್ಲ ನಾನು ಬಿಜೆಪಿಗೆ ಕರೆ ತರಲು ಚಿಂತನೆ ಮಾಡಿದ್ದೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ  ನೀಡಿದ್ದಾರೆ.

ಎಂಬಿಪಿ ಬಿಜೆಪಿಗೆ ಬರಲಿ. ಅವರ ಪರವಾಗಿ ನಾನು ನಿಲ್ಲುತ್ತೇನೆ. ನನಗೆ ಮಂತ್ರಿ ಸ್ಥಾನ ಬೇಡ. ಎಂಬಿಪಿಗೆ ಬೇಕಿರುವ ನೀರಾವರಿ ಮಂತ್ರಿ ಜೊತೆಗೆ ಬೇರೆ ಖಾತೆಗೂ ಲಾಬಿ ಮಾಡುತ್ತೇನೆ. ಎಂಬಿಪಿ ಬಿಜೆಪಿಗೆ ಬರಲು ತಯಾರಾಗ್ಲಿ ಎಂದ್ರು.

ಎಂಬಿಪಿ ಬಿಜೆಪಿ ತರಲು ಆವಾಗ ಆವಾಗ ಚಿಂತನೆ ನಡೆದಿತ್ತು. ಎಂಬಿಪಿ ಬಿಜೆಪಿಗೆ ಬಂದ್ರೆ ಒಳ್ಳೆಯ ಭವಿಷ್ಯವಿದೆ.
ಎಂಬಿಪಿ ಬಿಜೆಪಿ ಬಂದ್ರೆ ಸಿಎಂ ಬಿಟ್ಟು ಉಳಿದ ಬೇಕಿದ್ದ ಸ್ಥಾನ ನೀಡ್ತೇವಿ ಎಂದ್ರು.

ಬಿ.ಎಸ್.ಯಡಿಯೂರಪ್ಪ ಜೀವಂತವಿರುವ ತನಕ ಅವರೇ ಸಿಎಂ ಆಗುವುದು. ನನ್ನ ರಾಜ್ಯಾಧ್ಯಕ್ಷನನ್ನಾಗಿ ಮಾಡಲು ಹೈಕಮಾಂಡ್ ಇಂಟರೆಸ್ಟ್ ತೋರಿಸಿದೆ. ಈಗಾಗಲೇ ಕೇಂದ್ರದವರು ಮಾಹಿತಿ ಪಡೆದಿದ್ದಾರೆ. ನನ್ನನ್ನ ರಾಜ್ಯಾಧ್ಯಕ್ಷನನ್ನಾಗಿ ಮಾಡಲು ಹೈಕಮಾಂಡ್ ಗೆ ಒಲವಿದೆ ಎಂದ್ರು. ಬಿಎಸ್ವೈ ನಂತರ ಡೈಮಾನಿಕ ಲೀಡರ್ ನಾನೇ ಎಂದ ಯತ್ನಾಳ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ