ಅನಗತ್ಯ ಆರೋಪ ಮಾಡಿ ದೊಡ್ಡದು ಮಾಡುವ ಪ್ರಯತ್ನ-ಬಿ ಎಸ್ ವೈ ಕಿಡಿ
ಶನಿವಾರ, 27 ಆಗಸ್ಟ್ 2022 (20:33 IST)
ಸರ್ಕಾರದ ಮೇಲೆ 40% ಕಮಿಷನ್ ಆರೋಪದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.ಮೂರ್ಖರು ಸುಳ್ಳು ಮಾತಾಡುತ್ತಾರೆ.ಯಾವನೋ ಒಬ್ಬನಿಗೆ ಹೇಳಿಕೊಟ್ಟು ಮಾತಾಡು ತಕ್ಷಣ ಸತ್ಯ ಆಗಲು ಸಾಧ್ಯವಿಲ್ಲ.ಲೋಕಾಯುಕ್ತಕ್ಕೆ ಬೇಕಾದರೆ ದೂರು ಕೊಟ್ಟು ತನಿಖೆ ಮಾಡಿ, ಅಭ್ಯಂತರವಿಲ್ಲ.ಸುಮ್ನೆ ಅನಗತ್ಯ ಆರೋಪ ಮಾಡಿ ಅದನ್ನು ದೊಡ್ಡದು ಮಾಡುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ.ಬಹುಷ: ಇದು ಅವರದ್ದು. ಏನೂ ನಡೆಯುವುದಿಲ್ಲ.ವಿಧಾನ ಮಂಡಲ ಅಧಿವೇಶನದಲ್ಲಿ ತಕ್ಕ ಉತ್ತರವನ್ನು ನಾವು ಕೊಡುತ್ತೇವೆ.ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ.ಇದು ಸುಳ್ಳು ಆರೋಪ ಅಂತಾ ಶ್ರೀಸಾಮಾನ್ಯನಿಗೂ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.