ಬಣ್ಣದ ಮನೆ ನಿರ್ಮಿಸಿ ಕನ್ನಡಾಭಿಮಾನ
ಕನ್ನಡ ಅಂದ್ರೆ ಕನ್ನಡ ನಾಡಿನ ನಮಗೆ ತಾಯಿ ಮೇಲಿರುವಷ್ಟೇ ಅಭಿಮಾನ, ಪ್ರೀತಿ. ಸಕ್ಕರೆನಾಡು ಮಂಡ್ಯದಲ್ಲೊಬ್ಬ ಕನ್ನಡಾಭಿಮಾನಿ ಬಣ್ಣದ ಮನೆ ಎಂಬ ಮನೆಯನ್ನು ನಿರ್ಮಿಸಿಕೊಂಡು ಕನ್ನಡಾಭಿಮಾನ ಮೆರೆಯುತ್ತಿದ್ದಾರೆ. ಕನ್ನಡಾಂಬೆಗೆ ಗರ್ಭಗುಡಿ ನಿರ್ಮಿಸಿ, ನಿತ್ಯ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಈ ಬಣ್ಣದ ಮನೆಯಿಂದಲೇ ಇವರನ್ನು ಬಣ್ಣದಮನೆ ಶಿವನಂಜು ಎಂದು ಕರೆಯಲಾಗುತ್ತೆ. ಬಣ್ಣದ ಮನೆಯಲ್ಲಿ ಕನ್ನಡ ಸಾಹಿತ್ಯದ ಕಂಪು ಹರಡಿದ್ದು, ಕನ್ನಡದ ಕವಿಗಳ ಭಾವಚಿತ್ರವನ್ನು ಇವರು ಅಳವಡಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಸ್ನೇಹಿತರ ಜೊತೆ ಸಂಭ್ರಮ ಪಡ್ತಾರೆ. ಬಣ್ಣದ ಮನೆ ಶಿವನಂಜುವಿನ ಕನ್ನಡಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಿಪಡುತ್ತಿದ್ದಾರೆ.