ಸಿಲಿಕಾನ್ ಸಿಟಿಯಲ್ಲಿ ಪುಂಡರ ವ್ಹೀಲಿಂಗ್ ಹಾವಳಿ

ಬುಧವಾರ, 4 ಜನವರಿ 2023 (18:28 IST)
ಸಿಲಿಕಾನ್ ಸಿಟಿಯಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮಿತಿ ಮೀರುತ್ತಿದ್ದು, ತಮ್ಮ ಸಾಹಸವನ್ನು ಸೋಶಿಯಲ್‌ ಮೀಡಿಯಾದಲ್ಲೂ ಭರ್ಜರಿಯಾಗಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇವರ ಹಾವಳಿ ಹೆಚ್ಚುತ್ತಿದೆ.ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಸಿಕ್ಕಸಿಕ್ಕ ರೋಡ್‌ಗಳಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುವ ಚಟ ಹಲವು ಯುವಕರಲ್ಲಿ ಕಂಡುಬರುತ್ತಿದೆ. ರಿಂಗ್ ರೋಡ್, ಹೈವೇ, ಸಿಟಿ ಸೆಂಟರ್ ರೋಡ್‌ಗಳಲ್ಲಿ ಭಯಾನಕ ವ್ಹೀಲಿಂಗ್ ಕಂಡುಬರುತ್ತಿದೆ. ಡ್ರ್ಯಾಗ್ ರೇಸ್, ವ್ಹೀಲಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎನ್ನುವ ಪೊಲೀಸರಿಗೆ ಇದು ಕಾಣಿಸುತ್ತಿಲ್ಲ. ಹೊಸ ವರ್ಷಾಚರಣೆ ವೇಳೆ ಟ್ರಾಫಿಕ್ ಪೊಲೀಸ್ ಎಚ್ಚರಿಕೆ ನಡುವೆಯೂ ಪುಂಡರ ವ್ಹೀಲಿಂಗ್ ನಿಂತಿರಲಿಲ್ಲ.
 
ಏರ್ಪೋರ್ಟ್ ರೋಡ್, ತುಮಕೂರು ರೋಡ್, ನಾಗವಾರ ರಿಂಗ್ ರೋಡ್ ಹಾಗೂ ಸಿಟಿ ಒಳಗಿನ ಕೆಲ ರಸ್ತೆಗಳಲ್ಲಿ ಇವರದ್ದೇ ಹಾವಳಿ. ಇತರೆ ವಾಹನ ಸವಾರರು ಇವರ ವ್ಹೀಲಿಂಗ್‌ನಿಂದ ಭಯ ಬೀಳುತ್ತಿದ್ದಾರೆ. ಯಾವಾಗ ಇದರಿಂದಾಗಿ ಅಪಘಾತ ಸಂಭವಿಸುತ್ತದೋ ತಿಳಿಯದು. ಇವರು ಅಮಾಯಕರ ಪ್ರಾಣಕ್ಕೆ ಎರವಾಗುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.‌
 
ತಾವು ಮಾಡುವ ವ್ಹೀಲಿಂಗ್ ದೃಶ್ಯಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡುವ ಚಟವನ್ನೂ ಹಲವರು ಹೊಂದಿದ್ದಾರೆ. ವ್ಹೀಲಿಂಗ್ ದೃಶ್ಯಗಳಿಗೆ ಸಾಂಗ್ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. satish_.tj66 , shaktivel, me_shaffu , cl_me_navaz_34_kimg, nabiellnm, waseem_46, ll_fearless_kimg_ll, d_e_v_i_l_46 ಎಂಬಿತ್ಯಾದಿ ಇನ್‌ಸ್ಟಾ ಐಡಿಗಳ ಮೂಲಕ ಇವು ಅಪ್‌ಲೋಡ್ ಆಗುತ್ತಿವೆ. ಈ ವಿಡಿಯೋಗಳನ್ನು ನೋಡಿದರೆ ಬೆಚ್ಚಿ ಬೀಳುವಂತಿವೆ. ಕೆಲವರು ಕೈಯಲ್ಲಿ ಡ್ಯಾಗರ್‌, ಲಾಂಗ್‌ ಇತ್ಯಾದಿಗಳನ್ನು ಹಿಡಿದುಕೊಂಡು ಪೋಸ್‌ ಕೊಡುತ್ತಾ ವ್ಹೀಲಿಂಗ್‌ ಮಾಡುತ್ತಿದ್ದಾರೆ. ಇದು ಇನ್ನಷ್ಟು ಮಂದಿಗೆ ಇಂಥ ಕೃತ್ಯ ಕೈಗೊಳ್ಳಲು ಪ್ರೇರೇಪಿಸುವಂತಿದೆ.ಇನ್ನೂ ಇ ಬಗ್ಗೆ ಮಾತನಾಡಿದ ಟ್ರಾಫಿಕ್ ಡಿಸಿಪಿ‌ ಅನುಚೇತ್  ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ