ಅಂಗಡಿಯಿಂದ ಚಿಪ್ಸ್​ ಪ್ಯಾಕ್​ ಕದ್ದು ತಿಂದ ಪಕ್ಷಿ

ಬುಧವಾರ, 4 ಜನವರಿ 2023 (18:03 IST)
ಪ್ರಾಣಿ-ಪಕ್ಷಿಗಳೂ ಸಹ ಕರಿದ ತಿಂಡಿ-ತಿನಿಸುಗಳನ್ನು ಇಷ್ಟಪಟ್ತವೆ. ಅವುಗಳಿಗೆ ಕಾಳು-ಕಡ್ಡಿ ತಿಂದು ಬೋರ್​​ ಆಗಿದೆ ಎಂದು ಕಾಣುತ್ತೆ. ಮನುಷ್ಯನು ಟ್ರಿಪ್​​​ ಹೋಗುವಾಗ ದಾರಿಯಲ್ಲಿ ಇರುವ ಕೋತಿ, ಶ್ವಾನಗಳು, ಹಕ್ಕಿಗಳಿಗೆ ಏನಾದರೂ ಕುರುಕು ತಿಂಡಿಗಳನ್ನು ನೀಡ್ತಿರುತ್ತಾನೆ. ಇದರ ರುಚಿ ಕಂಡ ಅವುಗಳು ಕಾಡಿಗೆ ವಾಪಾಸ್​​ ತೆರಳದೇ, ರೋಡ್​​​​ಗಳಿಗೆ ಬಂದು ತಿಂಡಿ, ತಿನಿಸಿಗಾಗಿ ಕಾಯ್ತಿರುತ್ತವೆ. ಇದರಿಂದ ಎಷ್ಟೋ ಪ್ರಾಣಿಗಳಿಗೆ ಅಪಘಾತವಾಗಿ, ಹಲವು ಪ್ರಾಣಿಗಳು ಸಾವನಪ್ಪಿವೆ. ಇವುಗಳ ಸಾವಿಗೆ ಮನುಷ್ಯನೇ ನೇರ ಹೊಣೆ. ಇಲ್ಲೊಂದು ಯೂರೋಪಿಯನ್​​ ಗಿಲ್​​​ ಎಂಬ ಪಕ್ಷಿ ಅಂಗಡಿ​​ಗೆ ಬಂದಿದೆ. ಈ ಪಕ್ಷಿ ಅಂಗಡಿ ಬಾಗಿಲಿಗೆ ಬರಲು ಶಾಪ್​ನ ಸೆನ್ಸಾರ್​​​​​​ ಬಾಗಿಲು ಓಪನ್​ ಆಗುತ್ತದೆ. ಬಳಿಕ ಈ ಪಕ್ಷಿ ಒಳಗೆ ಹೋಗಿ ಒಂದು ಚಿಪ್ಸ್​ ಪ್ಯಾಕ್​ ಅನ್ನು ಕದ್ದು ತರುತ್ತದೆ. ಹೊರಗೆ ತಂದು ಕೊಕ್ಕಿನಿಂದ ಪ್ಯಾಕೆಟ್​ ಓಪನ್​ ಮಾಡಿ, ಒಳಗಿನ ಚಿಪ್ಸ್​​ ಅನ್ನು ತಿನ್ನುತ್ತದೆ. ಈ ವಿಡಿಯೋ ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ