ಅಪ್ರಾಪ್ತೆಯೊಂದಿಗೆ ಎರಡನೇ ವಿವಾಹವಾದ ಬಸ್ ಕಂಡೆಕ್ಟರ್

ಶನಿವಾರ, 16 ಡಿಸೆಂಬರ್ 2017 (20:32 IST)
ಮೊದಲ ಪತ್ನಿಗೆ ಕೈಕೊಟ್ಟಿರುವ ಬಸ್ ನಿರ್ವಾಹಕ ಅಪ್ರಾಪ್ತ ಯುವತಿಯೊಂದಿಗೆ ಎರಡನೇ ವಿವಾಹ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
 
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕೆಎಸ್ಆರ್​ಟಿಸಿ ಡಿಪೋ ಬಸ್ ಕಂಡಕ್ಟರ್ ರವಿಕುಮಾರ್(45) ಎಂಬಾತ ಅಪ್ರಾಪ್ತೆಯನ್ನು ಅಕ್ಟೋಬರ್ 23ರಂದು ಶ್ರೀರಂಗಪಟ್ಟಣದ ಗೌಸಿಯಾ ಘಾಟ್ ನಲ್ಲಿ ವಿವಾಹವಾಗಿದ್ದಾನೆ ಎಂದು ಬಸ್​ ನಿರ್ವಾಹಕನ ವಿರುದ್ಧ ಮೊದಲ ಪತ್ನಿ ಪದ್ಮಾವತಿ ದೂರು ದಾಖಲಿಸಿದ್ದಾಳೆ.
 
ಯುವತಿಯು ನಂಜನಗೂಡಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಳೆ. ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಮೊದಲ ಪತ್ನಿಗೆ ಇಬ್ಬರು ಗಂಡು ಮಕ್ಕಳಿದ್ದು, 2ನೇ ಮದುವೆ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ